ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ, ಕೇಂದ್ರದ ಕೃಷಿ ಕಾಯ್ದೆ ವಿರೋದಿಸಿ ಹಲವು ಸಂಘಟನೆಗಳು ಹಮ್ಮಿಕೊಂಡಿದ್ದ ಭಾರತ ಬಂದ್ ಶ್ರೀನಿವಾಸಪುರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಬಸ್ಸ್ ವಾಹನ, ಸಂಚಾರ ಇದ್ದು ವ್ಯಾಪಾರ ವಹಿವಾಟ ಕೂಡ ನಡೆಯುತ್ತಿತ್ತು.
ಪಟ್ಟಣದಲ್ಲಿ ಸಾರಿಗೆ ಸಂಚಾರ ಆಟೋ, ಇತರೆ ವಾಹನ ಎಂದಿನಂತೆ ಇತ್ತು ವ್ಯಾಪಾರ ವಹಿವಾಟ ಚಟುವಟಿಕೆ ಕೂಡಾ ಬೆಳಗ್ಗೆಯಿಂದ ನಡೆಯುತ್ತಿತ್ತು, ಈಗಾಗಲೇ ಕರೋನಾದಿಂದ ತತ್ತರಿಸಿ ಅರ್ಥಿಕ ಸಂಕಷ್ಟದಲ್ಲಿ ಇರುವ ಜನರಿಂದ ಭಾರತ್ ಬಂದ್ಗೆ ಬೆಂಬಲ ನೀಡಿಲ್ಲ.
ಇಂದಿರಾ ಭವನ್ ವೃತ್ತದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದವು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಶ್ರೀರಾಮರೆಡ್ಡಿ ಕೃಷಿ ಮಾರುಕಟ್ಟೆ ಕಾಯ್ದೆ ಬೆಲೆ ಭರವಸೆಗಳ ಒಪ್ಪಂದ ಮತ್ತು ಕೃಷಿ ಸೇವೆಗಳ ಕಾಯ್ದೆ ಅಗತ್ಯ ಸರಕು ಸೇವೆಗಳ ತಿದ್ದುಪಡೆ ಕಾಯ್ದೆಗಳು ರೈತರಿಗೆ ಮಾರಣಾಂತಿಕವಾಗಿದ್ದು, ಕೂಡಲೆ ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ದೇಶಕ್ಕೆ ಅನ್ನ ನೀಡುವ ಅನ್ನದಾತ ಕೃಷಿ ಬಿಕ್ಕಟ್ಟಿನ ಫಲವಾಗಿ ಲಕ್ಷ ಲಕ್ಷ ಸಂಖ್ಯೆಯಲ್ಲಿ ಅತ್ಮಹತ್ಯಗಳನ್ನು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ರೈತಾಪಿ ಕೃಷಿಯನ್ನು ಕಾಪೋರೇಟ್ ಕಂಪನಿಗಳಿಗೆ ಒಪ್ಪಿಸಲು ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ವಿದ್ಯುತ್ ಮಸೂದೆಯನ್ನು ರದ್ದು ಮಾಡಬೇಕೆಂದು ಅಗ್ರಹಿಸಿದರು.
ಕೆಪಿಆರ್ಎಸ್ನ ಜಿಲ್ಲಾಧ್ಯಕ್ಷ ಪಿ.ಆರ್. ಸೂರ್ಯನಾರಾಯಣ ಮಾತನಾಡಿ ರಾಜ್ಯದ ಕೃಷಿ ಭೂಮಿಯನ್ನು ಶ್ರೀಮಂತರ ಕಾಪೋರೇಟ್ ಕಂಪನಿಗಳಿಗೆ ವಹಿಸಲು ಜಾರಿಗೆ ತಂದಿರುವ ಭೂ ಸುದಾರಣೆ ಕಾಯ್ದೆ ತಿದ್ದುಪಡೆ ಕೃಷಿ ಉತ್ಪಾದನೆ ಜೊತೆಗೆ ಕೃಷಿ ಮಾರುಕಟ್ಟೆಯನ್ನು ಕಂಪನಿಗಳಿಗೆ ದಾರೆ ಎರಿಯಲು ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡೆ ಹೈನುಗಾರಿಕೆಯಲ್ಲಿ ತೊಡಗಿರುವ ಅಸಂಖ್ಯಾತ ರೈತರ ಕೃಷಿ ಕೂಲಿಕಾರರ ಹಾಗೂ ದಲಿತರ ಅಲ್ಪಸಂಖ್ಯಾತರ ಬದಕು ಆಹಾರ ಹಕ್ಕಿನ ಮೇಲೆ ದಾಳಿ ನಡೆಸುತ್ತಿರುವ ಗೋಹತ್ಯ ನಿಷೇದ ಕಾಯ್ದೆಗೆ ತಂದಿರುವ ತಿದ್ದುಪಡೆಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು ಅಡುಗೆ ಅನಿಲ, ಪೆಟ್ರೋಲ್, ಡೀಸಲ್. ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲಕ ಕೇಂದ್ರ ಸರ್ಕಾರ ಹಗಲು ದರೋಡೆಯನ್ನು ಮಾಡುತ್ತದೆ. ಕೂಡಲೆ ಇದನ್ನು ನಿಲ್ಲಿಸಬೇಕೆಂದು ಅಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡ ಎನ್. ಮುನಿಸ್ವಾಮಿ, ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಬೈರಾರೆಡ್ಡಿ, ಕಿಸಾನ್ ಕಾಂಗ್ರೇಸ್ ರಾಜ್ಯ ಕಾರ್ಯದರ್ಶಿ ದಿಂಬಾಲ ವೆಂಕಟಾದ್ರಿ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ನವೀನ್ಕುಮಾರ್, ಅಮಾಲಿ ಸಂಘದ ಅಧ್ಯಕ್ಷ ಮೂರ್ತಿ, ಕೊಪ್ಪವಾರಿಪಲ್ಲಿ ಲಕ್ಷ್ಮೀಪತಿ, ಮಂಚಿನೀಳ್ಳಕೋಟೆ ಕೊಂಡಪ್ಪ, ಅಂಬೇಡ್ಕರ್ ಪಾಳ್ಯದ ನರಸಿಂಹಮೂರ್ತಿ, ಇನ್ನು ಹಲವು ಮುಖಂಡರು ಭಾಗವಹಿಸಿದ್ದರು.