

ಮಂಗಳೂರು:ಬೊಂದೆಲಿನ ಸಂತಲಾರೆನ್ಸ್ ಅನುದಾನ ರಹಿತ ಶಾಲೆಯ 7ನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿ ಮಹಮ್ಮದ್ ಶಾಮಿ ದಕ್ಷಿಣ ಕನ್ನಡ ಜಿಲ್ಲೆಯಿಂದ 100 ಮೀಟರ್ ಓಟಕ್ಕೆ ಆಯ್ಕೆಯಾಗಿದ್ದು ಫೆಬ್ರವರಿ 20 ರಿಂದ 23ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಥೆಟಿಕ್ ಸ್ಪರ್ಧೆಯಲ್ಲಿ ಸ್ಪರ್ಧಿಸಲಿದ್ದಾನೆ. ಮೊಹಮ್ಮದ್ ಶಾಮಿ ಇವನು ಕಮರುದ್ದೀನ್ ಹಾಗೂ ನಾಜಿಯಾ ರವರ ಪುತ್ರನಾಗಿದ್ದು ದೈಹಿಕ ಶಿಕ್ಷಕರಾದ ಯೋಗೇಶ್ ಕುಮಾರ್ ರವರ ವಿದ್ಯಾರ್ಥಿಯಾಗಿರುತ್ತಾನೆ.