ಕೇರಳ: ಎರ್ನಾಕುಲಂನಲ್ಲಿ ಯೋಹಾನ ಸಾಕ್ಷಿಗಳ ಪ್ರಾರ್ಥನ ಸಮಾವೇಶದಲ್ಲಿ ಬಾಂಬ್ ಸ್ಪೋಟಗೊಂಡು 2 ಸಾವು ಸಂಭವಿಸಿದ ಭಯಾನಕ ಘಟನೆ ನಡೆದಿದೆ. ಈ ಕ್ರತ್ಯಕ್ಕೆ ಭಯೋತ್ಪಾದಕರು ಎಂಬ ಸುಳಿವು ಎಂದು ಸುದ್ದಿ ಹರಡಿದ್ದಾರೂ, ಈಗ ಈ ಕ್ರತ್ಯವನ್ನು ತಾನೇ ಮಾಡಿದ್ದೆಂದು ಒರ್ವ ಪೊಲೀಸರಿಗೆ ಶರಣಾಗಿದ್ದಾನೆ.
ಡೊಮಿನಿಕ್ ಮಾರ್ಟಿನ್
ಕೇರಳದ ಎರ್ನಾಕುಲಂ ಜಿಲ್ಲೆಯ ಕಲಮಸ್ಸೆರಿಯ ಪ್ರಾರ್ಥನಾ ಸಮಾವೇಶ ಕೇಂದ್ರದಲ್ಲಿ ಭಾನುವಾರ ಬೆಳಿಗ್ಗೆ ನಡೆದ ಬಾಂಬ್ ಪ್ರಕರಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಕುರಿತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಗಾಯಗೊಂಡವರಲ್ಲಿ ಕೆಲವರು ಚಿಂತಾಜನಕರಾಗಿದ್ದಾರೆ.
2,000 ಕ್ಕಿಂತಲೂ ಹೆಚ್ಚು ಜನರು ಜಮಾಯಿಸಿರುವ ‘ಯೆಹೋವನ ಸಾಕ್ಷಿ’ ಸಮಾವೇಶದ ಸಮಯದಲ್ಲಿ ಅನೇಕ ಸ್ಫೋಟಗಳು ಸಂಭವಿಸಿದವು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ವಿಶೇಷವಾಗಿ ಸರಣಿ ಸ್ಫೋಟ ಎಂದು ಸುದ್ದಿ ಮೂಲಗಳು ತಿಳಿಸಿವೆ. ಬಾಂಬ್ ಸ್ಕ್ವಾಡ್, ಫೋರೆನ್ಸಿಕ್ಸ್ ತಂಡ ಮತ್ತು ಎನ್ಐಎ ತಂಡವು ಸ್ಥಳಕ್ಕೆ ಧಾವಿಸಿದ್ದು, ಕಣ್ಣೂರು ರೈಲ್ವೆ ನಿಲ್ದಾಣದಿಂದ ಶಂಕಿತನನ್ನು ಬಂಧಿಸಲಾಗಿದೆ. “ಎಲ್ಲಾ ತನಿಖಾ ಸಂಸ್ಥೆಗಳು ಸ್ಥಳದಲ್ಲಿದ್ದು ತನಿಖೆ ನಡೆಯುತ್ತಿದೆ. ಇದು ಬಾಂಬ್ ಸ್ಫೋಟವೇ ಎಂಬುದನ್ನು ತನಿಖೆಯು ಬಹಿರಂಗಪಡಿಸುತ್ತದೆ … ಒಬ್ಬರು ಸತ್ತರು, 40 ಮಂದಿ ಗಾಯಗೊಂಡಿದ್ದಾರೆ, ನಾಲ್ವರು-ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬೇಬಿ ಪಿವಿ ತಿಳಿಸಿದ್ದಾರೆ.
ನಂತರ ಕೇರಳ ಡಿಜಿಪಿ ಅವರು ಸ್ಫೋಟಗಳಿಗೆ ಐಇಡಿ (ಸುಧಾರಿತ ಸ್ಫೋಟಕ ಸಾಧನ) ಬಳಸುವ ಬಗ್ಗೆ ಪ್ರಾಥಮಿಕ ತನಿಖಾ ಸುಳಿವುಗಳನ್ನು ಹೇಳಿದರೆ, ಅದನ್ನು ಸಂಗ್ರಹಿಸಲು “ಟಿಫಿನ್ ಬಾಕ್ಸ್” ಅನ್ನು ಬಳಸಲಾಗಿದೆ ಎಂದು ಶಂಕಿಸಲಾಗಿದೆ, ಬೆಂಕಿಯಿಡುವ ಸಾಧನದ ಬಳಕೆಯು ಸಹ ಈಗ ಹೊರಬರುತ್ತಿರುವ ಕೋನವಾಗಿದೆ.
ಯೆಹೋವನ ಸಾಕ್ಷಿಗಳು ಯಾರು
‘ಯೆಹೋವನ ಸಾಕ್ಷಿಗಳು’ ಏಸು ಕ್ರಿಸ್ತನು ಬರುವ ಮೊದಲು, ಅವನ ದಾರಿ ಸುಗಮಗೊಳಿಸಲು ಪಾಪಗಳನ್ನು ತೊರೆಯಿರಿ, ನ್ಯಾಯಮಾರ್ಗದಲ್ಲಿ ನೆಡೆಯಿರಿ ಎಂದು ಭೋದನೆ ಮಾಡುತಿದ್ದು, ಅವನೊರ್ವ ಶ್ರೇಷ್ಠ ಪ್ರೋಫೆತ್ ಎಂದು ಕ್ರೈಸ್ತರು ನಂಬುತ್ತಾರೆ, ಆದರೆ ಈ ಯೋವಾನನ ಸಾಕ್ಷಿಗಳ ಪಂಗಡ ಏಸುಕ್ರಿಸ್ತನು ದೇವನಲ್ಲಾ ಎಂದು ಸಾರಿ ಸಾರಿ ಹೇಳುತ್ತಾ, ಇತರರನ್ನು ತಮ್ಮಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿರುತ್ತಾರೆ, ಈ ಭಿನಾಭಿಪ್ರಾಯಕ್ಕೆ ಅನ್ಯ ಕ್ರೈಸ್ತರು ಈ ಪಂಗಡಕ್ಕೆ ಕಡು ವಿರೋಧವಿದೆ. ಈಗಿನ ಸುದ್ದಿಯ ಪ್ರಕಾರ ಯೆಹೋವನ ಸಾಕ್ಷಿಯ ಪಂಗಡದವನೆ ಆದ ಯೆಹೋವಾನ ಸಾಕ್ಷಿಗಳ ಸಿದ್ದಾಂತಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಇದ್ದು ಇದನ್ನು ನಿರ್ಲಕ್ಷಿದಕ್ಕಾಗಿ ಈ ಕ್ರತ್ಯವನ್ನು ಮಾಡಿದ್ದೆನೆಂದು ಹೇಳಿಕೊಂಡಿದ್ದಾನೆ. ಇತನನ್ನು ಡೊಮಿನಿಕ್ ಮಾರ್ಟಿನ್ ಎಂದು ಗುರುತಿಸಲಾಗಿದೆ.
ಯೆಹೋವನ ಸಾಕ್ಷಿ ಸಮಾವೇಶವು ವಾರ್ಷಿಕ ಕೂಟವಾಗಿದ್ದು, ಇದರಲ್ಲಿ “ಪ್ರಾದೇಶಿಕ ಸಮಾವೇಶಗಳು” ಎಂದು ಕರೆಯಲ್ಪಡುವ ದೊಡ್ಡ ಸಭೆಗಳು ಸಾಮಾನ್ಯವಾಗಿ ಮೂರು ದಿನಗಳ ಕಾಲ, ಶುಕ್ರವಾರದಿಂದ ಭಾನುವಾರದವರೆಗೆ ನಡೆಯುತ್ತವೆ. ಈ ಕೂಟವು ೩ ದಿನಗಳದಾಗಿದ್ದು, ಭಾನುವಾರ ಕೊನೆಯ ದಿನವಾಗಿತ್ತು.
ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಮಹಿಳೆಯಾಯರ ಬಗ್ಗೆ ಮಾಹಿತಿ ನೀಡಿದ ಕೇರಳ ಸಚಿವ ವಿಎನ್ ವಾಸವನ್, ಸ್ಫೋಟದಿಂದ ಉಂಟಾದ ಬೆಂಕಿಯಿಂದ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ. ಗಾಯಾಳುಗಳನ್ನು ಆಸ್ಟರ್ ಮೆಡ್ಸಿಟಿ, ರಾಜಗಿರಿ ಮತ್ತು ಕೊಚ್ಚಿಯ ಸನ್ರೈಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.