

ಬೋಳ ಶೇಖರ ಪೂಜಾರಿ ಹಾಗೂ ಭವಾನಿ ಪೂಜಾರಿ ದಂಪತಿಗಳ ಪುತ್ರ 24 ವರ್ಷ ವಯಸ್ಸಿನ ಯುವಕ 2022ರ ಆಗಸ್ಟ್ 15ರಂದು ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ 1854 ಕಬ್ಬಿಣದ ಮೊಳೆ ಹಾಗೂ ನೂಲಿನಿಂದ ತಯಾರಿಸಿದ ಭಾರತದ ನಕ್ಷೆ ಅಂತರರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ 2022ರಲ್ಲಿ ದಾಖಲೆ ಬರೆದಿದೆ.
ಇವರು ರಾಜ್ಯ ಮತ್ತು ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‍ನ ಕ್ರಿಯಾಶೀಲ ಸದಸ್ಯರು ಹಾಗೂ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯ ಕಾರ್ಯದರ್ಶಿಯಾಗಿ ಹಲವಾರು ಸೇವಾ ಸಂಸ್ಥೆಗಳ ಮೂಲಕ ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಕ್ರಿಯಾಶೀಲ ಸದಸ್ಯರಿವರು.


