

ಕುಂದಾಪುರ, ೨೩: ಶನಿವಾರ ತ್ರಾಸಿ ಬೀಚ್ ಸಮುದ್ರದಲ್ಲಿ ನಾಪತ್ತೆ ಆಗಿದ್ದ ಬೋಟ್ ರೈಡರ್ ರೋಹಿದಾಸ್ (41) ಮೃತದೇಹ ಇಂದು ಪತ್ತೆಯಾಗಿದೆ.ಸ್ಥಳೀಯ ಮೀನುಗಾರರು ಇಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ತೆರಳಲು ಹೋಗುತ್ತಿದ್ದಾಗ ಶವ ತೇಲುತ್ತಿರುವುದನ್ನು ಕಂಡು, ಸ್ಥಳೀಯ ಕರಾವಳಿ ಕಾವಲು ಪಡೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿಗೆ ಮಾಹಿತಿ ನೀಡಿದರು, ನಂತರ ಮೂವರು ಸೇರಿ ತೇಲುತ್ತಿದ್ದ ಶವವನ್ನು ಮೇಲೆಕ್ಕೆ ತಂದು, ಪೊಲೀಸರಿಗೆ ಮಾಹಿತಿ ನೀಡಿದರು.
ಗಂಗೊಳ್ಳಿ 24x 7 ಆಂಬ್ಯುಲೆನ್ಸ್ ಇದರ ಇಬ್ರಾಹಿಂ ಗಂಗೊಳ್ಳಿ, ಕೆಎನ್ಡಿ ಸಿಬ್ಬಂದಿ ನಿಶಾಂತ್ ಖಾರ್ವಿ, ಬೀಚ್ ಉಸ್ತುವಾರಿ ಸಿಬ್ಬಂದಿ ಸುರೇಶ್ ಕೊಡೇರಿ, ಮೃತ ರೊಹಿದಾಸ್ ಸಹೋದ್ಯೋಗಿಗಳು ಶವವನ್ನು ತೀರದಿಂದ ಸಾಗಿಸಲು ಸಹಕರಿಸಿದರು.