ಬ್ರಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ವರದಿ: ವಿಲ್ಫ್ರೆಡ್ ಮಿನೇಜೆಸ್,ಹಂಗಳೂರು


ಲಯನ್ಸ್ ಕ್ಲಬ್, ಹಂಗಳೂರು ಮತ್ತು ಶ್ರೀ ಸಾಯಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ) ನೆಂಪು ಇವರ ಜಂಟಿ ಆಶ್ರಯದಲ್ಲಿ ಶ್ರೀ ವಿನಾಯಕ ಯುವಕ ಮಂಡಲ, ನೆಂಪು, ಚಿಕ್ಕು ಯುವಕ ಸಂಘಟನೆ, ಹಿಜಾಣ, ಸರ್ಕಾರಿ ಪ್ರೌಡ ಶಾಲಾಭಿವೃದ್ಧಿ ಸಮಿತಿ, ಚಿತ್ತೂರು, ಫಿನಿಕ್ಸ್ ಅಕಾಡೆಮಿ ಇಂಡಿಯಾ, ಆರ್ಶೀವಾದ ಫ್ರೆಂಡ್ಸ್, ಅಬ್ಬಿ-ವಂಡ್ಸೆ ಮತ್ತು ಶೀ ದುರ್ಗಾ ಗಣೇಶ್ ಯುವಕ ಮಂಡಲ (ರಿ) ನೂಜಾಡಿ ಇವರ ನೇರವಿನೊಂದಿಗೆ ಇಂಡಿಯನ್ ರೆಡ್ ಕ್ರಾಸ್ ಸೊಸ್ಸೆಟಿ ಬ್ಲಡ್ ಭ್ಯಾಂಕ್ ಕುಂದಾಪುರ ಇವರಿಂದ ದಿನಾಂಕ 9/1/2021 ರಂದು ಶನಿವಾರ ಶ್ರೀ ಸಾಯಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ನೆಂಪು, ವಂಡ್ಸೆಯಲ್ಲಿ ಬ್ರಹತ್ ರಕ್ತದಾನ ಶಿಬಿರ ನಡೆಯಿತು. ಸಾಯಿ ಸ್ಪೋರ್ಟ್ಸ್ ಕ್ಲಬನ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಜಾಡ್ಕಟ್ಟು ಇವರು ಸ್ವಾಗತಿಸಿದರು ಅದೇ ದಿನ 43 ಸಲ ರಕ್ತದಾನ ಮಾಡಿದ ಶೀ ರಘವೇಂದ್ರ ನೆಂಪು ಇವರನ್ನು ಸನ್ಮಾನಿಸಲಾಯಿತು. ಇಂಡಿಯನ್ ರೆಡ್ ಕ್ರಾಸ್ ಸೊಸ್ಸೆಟಿ ಬ್ಲಡ್ ಭ್ಯಾಂಕ್ ಕುಂದಾಪುರ ಇದರ ಜಯಕರ ಶೆಟ್ಟಿಯವರು ರಕ್ತದಾನದ ಮಹತ್ವದ ಬಗ್ಗೆ ಸರಿಯಾದ ಮಾಹಿತಿ ನೀಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ರಮೇಶ್ ಕೆ ಕುಂದರ್ ಇವರು ಧನ್ಯವಾದ ಅರ್ಪಿಸಿದರು. ಲಯನ್ ಎಚ್ ಬಾಲಕೃಷ್ಣ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯ ಕ್ರಮದಲ್ಲಿ ಲಯನ್ ಸುಭಾಷ್ ಶೆಟ್ಟಿ, ಹೂಳದೊಗೆ, ಅಕ್ಷಯ ಹೆಮ್ಮಾಡಿ, ರವೀಂದ್ರ ಶೆಟ್ಟಿ ಚಿತ್ತೂರು, ಪ್ರವೀಣ್ ಕುಮಾರ್ ಶೆಟ್ಟಿ, ನೂಜಾಡಿ, ಜಗದೀಶ್ ನೆಂಪು, ಲಯನ್ ಸದಸ್ಯ ರಾದ ಲಯನ್ ವಿಲ್ಫ್ರೆಡ್ ಡಿಸೋಜಾ, ಲಯನ್ ವಾಲ್ಟರ್ ಡಿಸೋಜಾ, ಲಯನ್ ಥಿಯೋದರ್ ಡಿಮೆಲ್ಲೊ, ಮಾಜಿ ಲಯನ್ಸ್ಕೆ ಅಧ್ಯಕ್ಷರಾದ ಲಯನ್ ಕೆ.ವಿ. ಬಾಲಚಂದ್ರ ಶೆಟ್ಟಿ, ಕಾರ್ಯದರ್ಶಿಯಾರಾದ ಲಯನ್ ವಿಲ್ಫ್ರೆಡ್ ಮಿನೇಜಸ್, ಖಜಾಂಚಿ ಲಯನ್ ರಮೇಶ್ ಶೆಟ್ಟಿ, ಸಾಯಿ ಸ್ಪೋರ್ಟ್ಸ್ ಕ್ಲಬ್ ನ ಜಯರಜ್ ಶೆಟ್ಟಿ ವಂಡ್ಸೆ, ಸಂಜೀವ ಪೂಜಾರಿ ವಂಡ್ಸೆ, ರಮಾನಂದ ವಂಡ್ಸೆ,. ದಿವಾಕರ ವಂಡ್ಸೆ ಮತ್ತು ಇತರ ಸದಸ್ಯರು, ರೆಡ್ ಕ್ರಾಸ್ ಸೊಸೈಟಿ ಮತ್ತು ಬ್ಲಡ್ ಬ್ಯಾಂಕ್, ಕುಂದಾಪುರ ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು.