ಕುಂದಾಪುರ, ಜು.1: ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ಕಥೊಲಿಕ್ ಸಭಾ ಕುಂದಾಪುರ ಇವರ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ,ಆರೋಗ್ಯ ಆಯೋಗ, ಫಾಲ್ಕನ್ ಕ್ಲಬ್ ತೆಕ್ಕಟ್ಟೆ, ಬ್ಲಡ್ ಡೋನರ್ಸ್ ಕುಂದಾಪುರ, ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಜುಲಾಯ್ 1 ರಂದು
ಬೃಹತ್ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹೋಲಿ ರೋಸರಿ ಚರ್ಚಿನ ಧರ್ಮ ಗುರುಗಳಾದ ಅತಿ ವಂದನೀಯ ಸ್ಟ್ಯಾನಿ ತಾವ್ರೊ ” ರಕ್ತದಾನ ಕೇವಲ ರಕ್ತವನ್ನು ದಾನವಾಗಿ ಕೊಡುವುದು ಮಾತ್ರವಲ್ಲ ಜೀವದಾನಕ್ಕೆ ಸಮಾನ ” ಎಂದು ಸಂದೇಶ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ರೆಡ್ ಕ್ರಾಸ್ ಸೊಸೈಟಿಯ ಚೇರ್ಮೆನ್ ಶ್ರೀ ಜಯಕರ್ ಶೆಟ್ಟಿ ಮಾತನಾಡಿ ’ರಕ್ತದ ಅಗತ್ಯತೆ ಹೆಚ್ಚಾಗಿ ಇರುವ ಕುಂದಾಪುರ ಪರಿಸರದಲ್ಲಿ ಇಂತಹ ಅನೇಕ ಶಿಬಿರಗಳ ಆಯೋಜನೆ ಅಗತ್ಯ ಮತ್ತು ಸಮಾಜಕ್ಕೆ ಸ್ಪೂರ್ತಿದಾಯಕ’ ಎಂದರು.
ವೇದಿಕೆಯಲ್ಲಿ ಸಹಾಯಕ ಧರ್ಮ ಗುರುಗಳು ಅಶ್ವಿನ್ ಅರಾನ್ಹಾ, ಅಬ್ದುಲ್ ಮೋಸಿನ್ ಉಪಾಧ್ಯಕ್ಷರು ಪಾಲ್ಕನ್ ಕ್ಲಬ್ ,ಆದಿಲ್ ಗಫೂರ್ ಅಧ್ಯಕ್ಷರು ಸ್ಪೋರ್ಟ್ಸ್ ಕಮಿಟಿ ,ವಸಿಂ ಭಾಷಾ ಅಧ್ಯಕ್ಷರು ಜಾಮಿಯಾ ಮಸೀದಿ ,ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ಮ್ಯಾನೇಜರ್ ಆದ ರಾಯಲ್ ಲುವಿಸ್ ,ವಿಲ್ಸನ್ ಅಲ್ಮೇಡಾ ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷರು, ಉಪಸ್ಥಿತರಿದ್ದರು .
ರೋಜರಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶಾಲೆಟ್ ರೆಬೆಲ್ಲೊ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕರಾದ ಪ್ರೇಮ ಡಿಕುನ್ಹಾ ಪ್ರತಿನಿಧಿಸಿದರು. ಕಥೋಲಿಕ್ ಸಭಾ ಕುಂದಾಪುರ ಘಟಕ ಅಧ್ಯಕ್ಷೆ ಶೈಲಾ ಅಲ್ಮೇಡ ಸ್ವಾಗತಿಸಿದರು, ಕಾರ್ಯಕ್ರಮ ಸಂಚಾಲಕರಾದ ಡಾ. ಸೋನಿ ಡಿಕೋಸ್ತಾ ಕಾರ್ಯಕ್ರಮವನ್ನು ನಿರೂಪಿಸಿ, ಸಹಕಾರ್ಯದರ್ಶಿ ಸಂಗೀತ ಸರ್ವರನ್ನು ವಂದಿಸಿದರು.