ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರೆಡ್‍ಕ್ರಾಸ್ ಘಟಕಗಳ ಸಹಯೋಗದಲ್ಲಿ “ರಕ್ತದಾನ ಶಿಬಿರ”

JANANUDI.COM NETWORK


ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಖಾತರಿ ಕೋಶ, ರೆಡ್‍ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ಎನ್.ಸಿ.ಸಿ (ಭೂದಳ ಮತ್ತು ನೌಕಾದಳ ವಿಭಾಗ), ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಘಟಕ ಮತ್ತು ಕುಂದಾಪುರದ ರೆಡ್‍ಕ್ರಾಸ್ ಘಟಕಗಳ ಸಹಯೋಗದಲ್ಲಿ “ರಕ್ತದಾನ ಶಿಬಿರ” ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂದಾಪುರ ರೆಡ್‍ಕ್ರಾಸ್ ಘಟಕ ಸಭಾಪತಿಗಳಾದ ಎಸ್.ಜಯಕರ ಶೆಟ್ಟಿ ಅವರು ಜನೌಷಧಿ ಕೇಂದ್ರದಲ್ಲಿ ಕೈಗೆಟಕುವ ದರದಲ್ಲಿ ಔಷಧಿಗಳು ಸಿಗುತ್ತವೆ. ಅದರ ಸಂಪೂರ್ಣ ಉಪಯೋಗ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಘಟಕದ ಸಹಪ್ರಾಧ್ಯಾಪಕರಾದ ಡಾ. ಡಾ.ವೇಣು ರಾಜೇಂದ್ರನ್ ಅವರು ಮಾತನಾಡಿ ರಕ್ತದಾನ ಮಾಡುವುದರಿಂ ಆಗುವ ಉಪಯೋಗಗಳ ಕುರಿತು ಬೆಳಕು ಚೆಲ್ಲಿ ಕಾಲೇಜಿನ ಸೌಲಭ್ಯಗಳು ಬಹಳ ಚೆನ್ನಾಗಿವೆ. ಅದನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ. ಜನೌಷಧಿ ಕೇಂದ್ರದ ಸೇವೆ ಮೆಚ್ಚುವಂತಹದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಂದಾಪುರದ ರೆಡ್‍ಕ್ರಾಸ್ ಘಟಕದ ಶಿವರಾಮ ಶೆಟ್ಟಿ, ಸೀತಾರಾಮ ಶೆಟ್ಟಿ ಸದಸ್ಯೆ ಡಾ.ಸೋನಿ ಡಿಕೋಸ್ತಾ, ಮುಂತಾದವರು ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಡಾ.ಜಿ.ಎಮ್.ಗೊಂಡ ವಂದಿಸಿದರು. ಕಾಲೇಜಿನ ರೆಡ್‍ಕ್ರಾಸ್ ಘಟದ ಸಂಚಾಲಕರಾದ ಸತ್ಯನಾರಾಯಣ ಸ್ವಾಗತಿಸಿದರು.