

ಜನವರಿ ೧೪ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಸಂತ ನಿರಂಕಾರಿ ಮಿಶನ್ ಚಾರಿಟೇಬಲ್ ಫೌಂಡೇಶನ್ ವತಿಯಿಂದ ನಾಗೂರಿನ ಸಂತ ನಿರಂಕಾರಿ ಸತ್ಸಂಗ ಭವನದಲ್ಲಿ “ರಕ್ತದಾನ ಶಿಬಿರ” ಆಯೋಜಿಸಲಾಗಿದ್ದು ಮಾನವೀಯತೆಯ ಈ ಮಹಾಯಜ್ಞ ದಲ್ಲಿ ಸಂತ ನಿರಂಕಾರಿ ಮಿಶನ್ನಿನ ಅನುಯಾಯಿಗಳೊಂದಿಗೆ ಸುತ್ತ ಮುತ್ತಲಿನಊರಿನ ಅನೇಕ ಗಣ್ಯರು ಪಾಲ್ಗೊಂಡರು
ಈ ಕಾರ್ಯ ಕ್ರಮ ವನ್ನು ಪೂಜ್ಯನೀಯ ಝೋನಲ್ ಇಂಚಾರ್ಜ್ ಸುನೀಲ್ ರಾತ್ರಾಜೀಯವರು ಉದ್ಘಾಟಿಸಿದರು. ರೆಡ್ ಕ್ರಾಸ್ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿ ಯವರು ರಕ್ತ ದಾನದ ಮಹತ್ವ ವನ್ನು ತಳಿಸಿದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸಂತ ನಿರಂಕಾರಿಯ ಸಂಯೋಜಕರಾದ ಲಕ್ಷ್ಮಣ್ ಕೆ ಪೂಜಾರಿ ಯವರು ಭಾಗಿಯಾಗಿದ್ದರು.ಈ ರಕ್ತದಾನ ಶಿಬಿರದಲ್ಲಿ ಐನೂರು ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದು 169 ಜನರು ರಕ್ತದಾನ ಮಾಡಿದರು.




