ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ – ಬ್ಲಾಕ್ ಕಾಂಗ್ರೆಸ್ ಕೋಟೇಶ್ವರ ಜಿಲ್ಲಾ ಪಂಚಾಯತ್ ವ್ಯಾಪ್ತಿ

JANANNUDI.COM NETWORK

ಇಂದು ಜೂನ್ 13 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೋಟೇಶ್ವರ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಭಟನೆಯ ನಡೆಯಿತು.

ಕುಂದಾಪುರ – ಬಸ್ರೂರು ರಸ್ತೆಯಲ್ಲಿರುವ ಎಚ್ ಪಿ ಪೆಟ್ರೋಲ್ ಪಂಪ್ ಕೋಣಿ ಬಳಿ ಇಂದು ಬೆಳಿಗ್ಗೆ ಗಂಟೆ 9.00 ಕ್ಕೆ ಪ್ರತಿಭಟನೆ ನಡೆಯಿತು.

ಹಿರಿಯ ಕಾಂಗ್ರೆಸ್ ನಾಯಕರಾದ ಕೃಷ್ಣ ದೇವ ಕಾರಂತರು ಮಾತನಾಡಿ ಪೆಟ್ರೋಲ್ ದರ ನಾಟೌಟ್ 100ರಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ದೇಶದ ಜನರ ಜೀವನ ಅಸಹನೀಯ ಗೊಳಿಸಿದೆ ಎಂದರು. ಪರೋಕ್ಷವಾಗಿ ಪ್ರಯಾಣ ದರ ಮತ್ತು ಅಗತ್ಯ ವಸ್ತುಗಳಗಳ ಬೆಲೆ ಏರಿಕೆಯಾಗಿ ಜನಸಾಮಾನ್ಯ ಜೇಬಿಗೆ ಕತ್ತರಿಯನ್ನು ಇಟ್ಟಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಸದಸ್ಯ ರಾದ ಅಶ್ವತ್ ಕುಮಾರ್ ಮಾತನಾಡಿ 2014ರ ಚುನಾವಣೆಯಲ್ಲಿ ಬೈಕ್ ಸವಾರ ಯುವ ಜನತೆಯ ಜನತೆಯ ಮತವನ್ನು ಪಡೆದು ಅಧಿಕಾರಕ್ಕೆ ಬಂದ ಕೇಂದ್ರ ಸರಕಾರ “ಅಚ್ಛೇ ದಿನ್” ಭರವಸೆಯನ್ನು ನೀಡಿತ್ತು. ಆದರೆ ಮುಂದಿನ ಏಳು ವರ್ಷಗಳ ಲ್ಲಿ ಇಂಧನ ದರ ತೆರಿಗೆ ಏರಿಕೆಯನ್ನು ಮೂರು ಪಟ್ಟು ಮಾಡಿ ಸುಲಿಗೆಯನ್ನು ಮಾಡುತ್ತಿದೆ ಎಂದರು.ಹಿರಿಯ ನಾಯಕರಾದ ಆನಂದ ಭಂಡಾರಿ ಸಂದರ್ಭೋಚಿತ ವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಸಂತಿ ಮೊಗವೀರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಬ್ಲಾಕ್ ಕಾರ್ಯದರ್ಶಿ ಆಶಾ ಕಾರ್ವಾಲೊ, ಪಂಚಾಯತ್ ಉಪಾಧ್ಯಕ್ಷ ಅಶೋಕ ಭಂಡಾರಿ, , ಅಶೋಕ ಸುವರ್ಣ, ಗಣಪತಿ ಶೇಟ್, ರಾಘವೇಂದ್ರ ಶೆಟ್ಟಿ, ಸೌಮ್ಯ ಮೊಗವೀರ, ಶೀನ ಪೂಜಾರಿ, ಲಾರೆನ್ಸ್ ಡಿಸೋಜ, ಶಿವರಾಯ ದೇವಾಡಿಗ, ನಿತಿನ್ ಡಿಸೋಜ, ಪ್ರವೀಣ್ ಭಂಡಾರಿ, ಮೌರೀಸ್ ಕರ್ವಾಲೋ, ಪಿ ಸುಬ್ರಹ್ಮಣ್ಯ, ಅನಿಲ್ ಭಂಡಾರಿ, ಹ್ಯಾರಿ ಡಿಸೋಜ, ಅಭಿಜಿತ್ ಪೂಜಾರಿ ಹೇರಿಕುದ್ರು, ಸಂತೋಷ ಬರೆಕಟ್ಠು, ವಲೇರಿಯನ್ ಕೋತಾ, ಸ್ಠ್ಯಾನಿ ಇನ್ನಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ನಾರಾಯಣ ಆಚಾರ್ ಸ್ವಾಗತಿ ನಿರೂಪಿಸಿದರು.