JANANUDI.COM NETWORK
ಕುಂದಾಪುರ,ಎ.14: ಬ್ಲಾಕ್ ಸಮಿತಿ ಕುಂದಾಪುರ ಇವರಿಂದ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆಯನ್ನು ಮಂಡಾಡಿ-ಹೊಂಬಾಡಿ ಗ್ರಾಮದ ತಲಮಕ್ಕಿ ಕಾಲೋನಿಯಲ್ಲಿ ಆಚರಿಸಲಾಯಿತು.
ಜನಸಾಮಾನ್ಯರ ರಕ್ಷಣೆಗಾಗಿ ರಚನೆಗೊಂಡಿರುವ ಅಂಬೇಡ್ಕರ್ ಸಂವಿಧಾನ ಬಿಜೆಪಿಯ ಆಡಳಿತದಲ್ಲಿ ಆಪಾಯದಲ್ಲಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಸದಸ್ಯರಾದ ಅಶ್ವತ್ ಕುಮಾರ್ ಅವರು ಗಾಂಧಿ ಮತ್ರು ಅಂಬೇಡ್ಕರ್ ನಮ್ಮ ದೇಶದ ಎರಡು ಕಣ್ಣುಗಳಿದ್ದಂತೆ. ಗಾಂಧಿ ಬ್ರಿಟಿಷರ ವಿರುದ್ಧ ಹೋರಾಡಿದರೆ, ಅಂಬೇಡ್ಕರ್ ದೇಶದಲ್ಲಿ ಅಚರಣೆಯಲ್ಲಿದ್ದಂತಹ ಅನಿಷ್ಟ ಪದ್ಧತಿಗಳಾದ ಅಸ್ಪರ್ಶ್ಯತೆ ವಿರುದ್ದ ಹೋರಾಡಿದರು. ಸಂವಿಧಾನದ ಭದ್ರತೆ ದಲಿತರಿಗೆ ಮಾತ್ರ ಸೀಮಿತವಾಗಿರದೆ ದೇಶದ ಪ್ರತಿಯೊಬ್ಬರಿಗೂ ದೊರಕಿದೆ ಎಂದರು.
ಹೊಂಬಾಡಿ – ಮಂಡಾಡಿ ಪಂಚಾಯತ್ ಸದಸ್ಯರಾದ ಸಂತೋಷ ಪೂಜಾರಿ, ಬ್ಲಾಕ್ ಕಾಂಗ್ರೆಸ್ ಸದಸ್ಯೆ ಜ್ಯೋತಿ ಡಿ. ನಾಯಕ್ ಅವರು ಜನ್ಮದಿನಾಚರಣೆಯ ಶುಭನುಡಿಗಳನ್ನಾಡಿದರು.
ಪಂಚಾಯತ್ ಸದಸ್ಯರಾದ ಉದಯ ಮೊಗವೀರ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಧರ್ಮಪ್ರಕಾಶ್, ಅಶೋಕ್ ಸುವರ್ಣ, ರೋಶನ್ ಶೆಟ್ಟಿ, ಕೆ.ಪಿ.ಅರುಣ್ ಪಟೇಲ್, ಕೆ.ಸಚ್ಚಿನ್ ಕುಮಾರ್, ನಿತಿನ್ ಡಿಸೋಜ ಕೋಣಿ, ಮುನಾಫ್ ಕೋಡಿ, ತಲಮಕ್ಕಿ ಕಾಲನಿಯ ಶಶಿಕಲಾ, ಅನಿತಾ, ಸರಿತಾ, ಸುಗಂಧಿ, ದಿವಾಕರ, ಹರ್ಷ, ರಮೇಶ, ಜಾನಕಿ, ಇನ್ನಿತರರು ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯೆ ದೀಪಾ ಜಪ್ತಿ ಸ್ವಾಗತಿಸಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಪ್ರಾಸ್ತಾವಿಕ ಮಾತುಗಳನ್ನಾಡಿ ನಿರೂಪಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಯೋಜನೆಯ ಸಂಚಾಲಕರಾದ ಸತೀಶ್ ಜಪ್ತಿ ವಂದಿಸಿದರು.