ಮಣಿಪಾಲ ಆಸ್ಪತ್ರೆಯ ಏಳು ರೋಗಿಗಳಿಗೆ ಬ್ಲ್ಯಾಕ್ ಫಂಗಸ್

JANANUDI.COM NETWORK


ಮಂಗಳೂರು:ಮೇ.20 ಮಣಿಪಾಲ ಕಸ್ತೂರಿ ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಆಸ್ಪತ್ರೆಯಲ್ಲಿ ಕೋವಿಡ್ -19ಗೆ ಚಿಕಿತ್ಸೆ ಪಡೆಯುತ್ತಿರುವ ಏಳು ರೋಗಿಗಳಲ್ಲಿ ಕಪ್ಪು ಶಿಲೀಂಧ್ರ (ಮ್ಯೂಕಾರ್ಮೈಕೋಸಿಸ್) ಸೋಂಕು ಪತ್ತೆಯಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿ (ಡಿ ಎಚ್ ಒ) ಸುಧೀರ್ ಚಂದ್ರ ಸೂಡಾ ಮಾಧ್ಯಮಕ್ಕೆ ತಿಳಿಸಿದ್ದಾರೆ 7 ರಲ್ಲಿ ಐದು ಮಹಿಳೆಯರು ಮತ್ತು ಇಬ್ಬರು ಪುರುಷರಲ್ಲಿ ಕಪ್ಪು ಶಿಲೀಂಧ್ರ ಪತ್ತೆಯಾಗಿದ್ದು, ಪ್ರಸ್ತುತ ಇವರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ರೋಗಿಗಳಿಗೆ ಅನಿಯಂತ್ರಿತ ಮಧುಮೇಹವೂ ಇದೆ ಎಂದು ಸೂಡಾ ತಿಳಿಸಿದ್ದಾರೆ
”ವಿವಿಧ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಕೆಎಂಸಿಗೆ ದಾಖಲಾಗಿದ್ದ ಈ ರೋಗಿಗಳಿಗೆ ಈ ಹಿಂದೆ ಕೋವಿಡ್-19 ಪಾಸಿಟಿವ್ ದಢಪಟ್ಟಿತ್ತು. ಅವರು ಚಿತ್ರದುರ್ಗ, ಧಾರವಾಡ, ಹರಿಹರ, ದಾವಣಗೆರೆ, ಶಿವಮೊಗ್ಗ, ರಾಣೆಬೆನ್ನುರು ಮತ್ತು ಕೊಪ್ಪಳ ಮೂಲದವರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಯಾವುದೇ ಕಪ್ಪು ಶಿಲೀಂಧ್ರ ಪ್ರಕರಣ ವರದಿಯಾಗಿಲ್ಲ’ ಎಂದು ಸುಧೀರ್ ಚಂದ್ರ ಸೂಡಾ ಹೇಳಿದ್ದಾರೆ.