ಅಪಾಯಕಾರಿ ಬ್ಲ್ಯಾಕ್ ಫಂಗಸ್ ಕೋವಿಡ್ ಹೆಚ್ಚುತ್ತದೆ – ಆರೋಗ್ಯ ಇಲಾಖೆ ಎಚ್ಚರಿಕೆ

JANANUDI.COM NETWORK

ಬೆಂಗಳೂರು,ಮೇ. 10; 2ನೇ ಅಲೆ ನಡುವೆ ಮತ್ತೊಂದು ಆಘಾತಕಾರಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಬಹಿರಂಗವಾಗಿದೆ. ಕೊರೊನಾ ಸೋಂಕಿತರಲ್ಲಿ ’ಬ್ಲ್ಯಾಕ್ ಫಂಗಸ್’ ಅಥವಾ ‘ಮುಕರೋ ಮೈಕೋಸಿಸ್  ಫಂಗಸ್’ ಪತ್ತೆಯಾಗುತ್ತಿದೆ.ಎಂದು ತಿಳಿಸಿದೆ.      ಈ ಬಗ್ಗೆ  ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಸಿದ್ದು, ಕೊರೊನಾ ಸೋಂಕು ನಿವಾರಣೆಯಾದವರಲ್ಲಿ ಈ ಫಂಗಸ್ ಪತ್ತೆಯಾಗುತ್ತಿದೆ.ಎಂದು ಆಘಾತಕಾರಿ ವಿಷಯತಿಳಿಸಿದೆ, ಹಾಗಾಗಿ ಕೊರೊನಾ ಸೋಂಕಿತರು ಅತಿಯಾದ ಸ್ಟಿರಾಯ್ಡ್, ಆಂಟಿಬಯೋಟಿಕ್ ಗಳನ್ನು ಅನಗತ್ಯವಾಗಿ ಸೇವಿಸದಿರುವುದು ಉತ್ತಮ. ಹಾಗೇ ಶುಗರ್ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಕೇಂದ್ರ ಆರೋಗ್ಯ ಇಲಾಖೆ ಸಲಹೆ ನೀಡಿದೆ