ಕಾರ್ಕಳ,ಅ, 24: ಸನ್ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ರಾಜ್ಯ ಕಂಡ ಅತ್ಯಂತ ಸರಳ ಸಜ್ಜನ ರಾಜಕಾರಣಿ. ಅವರು ಎಂದೂ ಮೋದಿ, ಅಮಿತ್ ಷಾ, rss ನಂತೆ ದ್ವೇಷದ ರಾಜಕಾರಣ ಮಾಡಿದವರು ಅಲ್ಲಾ. ಎಲ್ಲಾ ಜಾತಿ, ಧರ್ಮ, ರಾಜಕೀಯ ಪಕ್ಷಗಳನ್ನು ಸಮಾನವಾಗಿ ಕಾಣುವುದು ಅವರ ಉದಾತ್ತ ಗುಣ.
ಅದಕ್ಕಾಗಿ ಅವರನ್ನು ಜನರು ಅನ್ನರಾಮಯ್ಯ, ಸಿದ್ದಣ್ಣ, ಟಗರು ಮುಂತಾದ ಅನ್ವರ್ಥ ನಾಮಗಳಿಂದ ಗುರುತಿಸುತ್ತಿರುವುದು. ಅವರ ಮುಂದಾಲೋಚನೆಯಿಂದ ಇಂದು ಕರ್ನಾಟಕ ಸದೃಢ, ಸುಭಿಕ್ಷಾ, ಸಾಮ್ರಾದ್ಧ ರಾಜ್ಯವಾಗಿ ಬೆಳೆಯುತ್ತಿದೆ ಮತ್ತು ಬೆಳಗುತ್ತಿದೆ.
ಅಂತಹ ಒಬ್ಬ ರಾಜಕಾರಣಿಯ ರಾಜಕೀಯ ಭವಿಷ್ಯವನ್ನು ಮೋಟಕುಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿರುವುದು ವಿಷಾದನೀಯ. ಇದು ಬಿಜೆಪಿಯ ಕ್ರೂರ ಮನಸ್ಥಿತಿ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯನವರನ್ನು ಬೀಳಿಸುವುದು ಅಂದರೆ, ಕರ್ನಾಟಕದ ಜನತೆಗೆ ಮಾಡುವ ದ್ರೋಹವಾಗಿದೆ, ಇವರಿಗೆ ಕರ್ನಾಟಕದ ಏಳಿಗೆ ಬೇಡ ಅನ್ನುವ ಧೋರಣೆ, ಸಿದ್ದರಾಮಯನವರ ರಾಜೀನಾಮೆ ಕೇಳುವುದು ಒಂದೇ ಕರ್ನಾಟಕದ ಅಭಿವ್ರದ್ದಿ ಬೇಡ ಎನ್ನುವುದು ಒಂದೇ, ಹೀಗಾಗಿ ಕರ್ನಾಟಕದ ಅಭಿವ್ರದ್ದಿ ಸಹಿಸದವರು ಮಾತ್ರ ಸಿದ್ದರಾಮಯನವರ ರಾಜೀನಾಮೆಗೆ ಆಗ್ರಹಿಸುತ್ತಾರೆ, ಮತ್ತು ದುರಾಸೆಯಿಂದ ಹೋರಾಟ ಮಾಡುತ್ತಾರೆ. ಬಿಜೆಪಿಗೆ ರಾಜ್ಯದ ಜನತೆಯ ಬಗೆಗಿನ ಕಾಳಜಿ ಇಲ್ಲಾ ಅನ್ನುವುದು ಇದರಿಂದ ಸ್ಪಷ್ಟ. ಇದ್ದಿದ್ರೆ ಒಂದು ಪೂರ್ಣ ಬಹುಮತದ ಸರಕಾರವನ್ನು ಬಿಳಿಸುವ ಸಲುವಾಗಿ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿಯು ಪ್ರಯತ್ನ ಪಡುತಿರಲಿಲ್ಲ.
ಶೂನ್ಯ ಜನಪರ ಕಾಳಜಿ ಹೊಂದಿರುವ ಬಿಜೆಪಿಯ ಮೂಡ ಹಗರಣ ಅನ್ನುವ ರಾಜಕೀಯ ಪ್ರಹಸನ, ತಿಪ್ಪರಲಾಗ ಈಗ ರಾಜ್ಯದ ಜನತೆಗೆ ಅರ್ಥ ಆಗಿದೆ. ಮುಂದೆ ಬಿಜೆಪಿ ಇದಕ್ಕೆ ತಕ್ಕ ಶಾಸ್ತಿ ಅನುಭವಿಸಲಿದೆ ಎಂದು”ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾ ಡಿಸೋಜ,ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ