

ಉಡುಪಿ; ಹಬ್ಬದ ಅಂಗವಾಗಿ ಚಲಿಸುತ್ತಿರುವ ವಿಶೇಷ ರೈಲು ಸಂಖ್ಯೆ 91997/91998 ಮಡಗಾಂವ್ನಿಂದ ವೇಲಂಕಣಿಗೆ (ನಾಗಪಟ್ಟಣಂ) ರೈಲು ಸೇವೆಯನ್ನು ಕರ್ನಾಟಕ ಕರಾವಳಿ ಮಾರ್ಗವಾಗಿ ಅಲಿಸುವ ನಿಯಮಿತಗೊಳಿಸುವಂತೆ ಉಡುಪಿ – ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರದ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯರಲ್ಲಿ ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತ ಮೋರ್ಚಾದವರು ಕೋರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾನ್ಯ ಲೋಕ ಸಭಾ ಕ್ಷೇತ್ರದ ಸದಸ್ಯರಾದ ಕೋಟ ಶ್ರೀನಿವಾಸ್ ಪೂಜಾರಿಯವರು ತಕ್ಷಣ ಸ್ಪಂದಿಸಿ ರೈಲ್ವೆ ಸಚಿವರಲ್ಲಿ ಮಾತನಾಡಿದ್ದಾರೆ ಏಂದು ಅಲ್ಪಸಂಖ್ಯಾತ ಮೋರ್ಚಾದ ಉಡುಪಿ ಜಿಲ್ಲಾಧ್ಯಕ್ಷ ರುಡಾಲ್ಟ್ ಡಿಸೋಜ ಇವರು ಮಾದ್ಯಮಕ್ಕೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರು ನವೀನ್ ಡಿಸೋಜ, ಉಡುಪಿ, ಕಾರ್ಕಳ, ಕಾಪು, ಕುಂದಾಪುರ, ಬ್ರಹ್ಮಾವರ, ಬೈಂದೂರು, ಹೆಬ್ರಿ ತಾಲೂಕಿನಿಂದ ಗ್ಲೆನ್ ಮೋನಿಸ್, ಡ್ಯಾನಿಸ್ ಮಶ್ಚರೇನ್ಹಸ್, ಆಲಿವರ್ ಪೆರಂಪಳ್ಳಿ ಮತ್ತು ಎಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕಾರಿ ಸದಸ್ಯರು ಭಾಗವಹಿಸಿದ್ದರು.


