ವಕ್ಫ್ ಬೋರ್ಡ್ ಆಸ್ತಿಗಳನ್ನು ಸ್ವಾದೀನತೆ ಪಡೆಸಿಕೊಳ್ಳುವ ಹುನ್ನಾರದಲ್ಲಿರುವ ಬಿಜೆಪಿ ಪಕ್ಷದ ಅಜೆಂಡಾ ಜಾರಿ ಆಗದಿರಲು ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು,ಉಡುಪಿ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಮಹಮ್ಮದ್ ಸುಹಾನ್ ಮಾದ್ಯಮ ಮುಖಾಂತರ ಮುಸ್ಲಿಂ ಸಮುದಾಯವರಿಗೆ ತಿಳಿಸಿದ್ದಾರೆ
ಬಿಜೆಪಿ ಈಗಾಗಲೇ ವಕ್ಫ್ ಬೋರ್ಡ್ ಅದೀನ ಇರುವ ಮಸೀದಿ, ಮದ್ರಸಾ, ಉರ್ದು ಶಾಲೆ, ದರ್ಗಾ, ಖಾಬಾರಿಸ್ತಾನ, ಇನ್ನಿತರ ಆಸ್ತಿಗಳನ್ನು ತನ್ನ ಆಡಳಿತದ ಒಳಗೆ ತೆಗೆದುಕೊಂಡು ನಮ್ಮ ಹಿರಿಯರು ಸಮುದಾಯದ ಒಳಿತಿಗಾಗಿ ಮಾಡಿರುವ ವಕ್ಫ್ ದಾನಗಳನ್ನು ರದ್ದು ಪಡಿಸುವ ಬಗ್ಗೆ ಈಗಾಗಲೇ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಕೊಂಡಿರುವುದು ಮಾತ್ರವಲ್ಲ ಬಿಜೆಪಿ ಬೆಂಬಲಿತ ವ್ಯಕ್ತಿಗಳು ನ್ಯಾಯಾಲಯಕ್ಕೂ ಅರ್ಜಿ ಸಲ್ಲಿಸಿರುವುದು, ಸಮಾಜವನ್ನು ಒಡೆಯುವ ಒಂದು ಹುನ್ನಾರ ಆಗಿದೆ. ಇದನ್ನು ತಡೆಯಬೇಕಾದರೆ ಮುಸ್ಲಿಂ ಸಮುದಾಯ ಈ ಭಾರಿ ಸಂಘಟಿತರಾಗಿ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಹಿಜಾಬ್, ಹಲಾಲ್, ಜಟ್ಟಕ ಕಟ್, ಮಂದಿರ, ಮಸೀದಿ ಎಂದು ಸಮಾಜವನ್ನು ಒಡೆಯುತ್ತಿರುವ ಕೋಮುವಾದಿಗಳಿಗೆ ಕರ್ನಾಟಕ ಸರ್ಜಜನಾಂಗದ ಶಾಂತಿಯ ತೋಟ ಎಂದು ಸಾಬೀತು ಪಡಿಸುವ ಜವಾಬ್ದಾರಿ ನಮ್ಮ ಮೇಲಿದೆ” ಎಂದು ಮಾದ್ಯಮ ಮುಖಾಂತರ ಅವರು ಹೇಳಿಕೆ ನೀಡಿದ್ದಾರೆ.