ಉಡುಪಿಯ ಬಿಷಪ್ ಅ|ವಂ|ಡಾ| ಜೆರಾಲ್ಡ್ ಲೋಬೊ ಅವರ ಕ್ರಿಸ್ಮಸ್ ಸಂದೇಶ

JANANUDI.COM NETWORK

ಉಡುಪಿ:ಡಿ . 23: ಕ್ರಿಸ್ಮಸ್ ಎಂಬುದು ಸ್ವರ್ಗ ಮತ್ತು ಭೂಮಿಗೆ ಬಹಳ ಸಂತೋಷವನ್ನು ನೀಡುವ ಹಬ್ಬವಾಗಿದೆ. ದೇವರ ಮಗನು ಈ ಭೂಮಿಯಲ್ಲಿ ಮನುಷ್ಯನಾಗಿ ಜನಿಸಿದನು, ಆದರೆ ನಮ್ಮಡೊನೆ ಪಾಪವಿಲ್ಲದೆ ಬದುಕಿದನು. ಯೇಸು ಕ್ರಿಸ್ತನು ಬಡವರಿಗೆ ಭರವಸೆಯ ಕಿರಣವಾಗಿ, ನೊಂದವರಿಗೆ ಸಾಂತ್ವನವಾಗಿ, ಒಂಟಿತನಕ್ಕೆ ಸಂಗಾತಿಯಾಗಿ, ಹತಾಶರಿಗೆ ಭರವಸೆಯಾಗಿ ಮತ್ತು ತಿರಸ್ಕರಿಸಿದವರಿಗೆ ಸ್ನೇಹಿತನಾಗಿರುವನು. ಕ್ರಿಸ್ಮಸ್ ಒಳ್ಳೆಯ ಇಚ್ಛೆಯಳ್ಳವರ ಪ್ರತಿಯೊಬ್ಬ ವ್ಯಕ್ತಿಗೂ ಭರವಸೆಯ ಕಿರಣವಾಗಿರುವನು.
ಕೋವಿಡ್ -19 ನಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಜಗತ್ತು ಸಾಕಷ್ಟು ನೋವುಗಳನ್ನು ಅನುಭವಿಸಿದೆ. ಲಕ್ಷಾಂತರ ಕುಟುಂಬಗಳು ಬಡತನ ಮತ್ತು ನಿರುದ್ಯೋಗಕ್ಕೆ ಬಲಿಯಾಗಿವೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ದಣಿದ ಮತ್ತು ಖಿನ್ನತೆಗೆ ಒಳಗಾದ ಜಗತ್ತಿಗೆ ಹೊಸ ಜೀವನ ಬೇಕು. ಕ್ರಿಸ್ಮಸ್ ನಮ್ಮಲ್ಲಿ ಮಾನವೀಯತೆಯ ಆಳವಾದ ಮನೋಭಾವವನ್ನು ತುಂಬಬೇಕು. ಸ್ವಾತಂತ್ರ್ಯ, ಶಾಂತಿ, ಕ್ಷಮೆ, ಸಹನೆ, ಸೌಹಾರ್ದತೆಯು ಮನುಷ್ಯರ ಉಸಿರಾಗಬೇಕು.
ಕ್ರಿಸ್ಮಸ್ ಶಾಂತಿ ಮತ್ತು ಪ್ರೀತಿಯ ಹಬ್ಬವಾಗಿದೆ. ಈ ಮಹಾ ಹಬ್ಬವನ್ನು ಯೋಗ್ಯ ರೀತಿಯಲ್ಲಿ ಆಚರಿಸಲು ಸಾಧ್ಯವಾಗದಂತಹ ಲಕ್ಷಾಂತರ ಜನರು ನಮ್ಮ ಸುತ್ತಲೂ ಇದ್ದಾರೆ. ಕ್ರಿಸ್ಮಸ್ ಚೈತನ್ಯವು ನಮ್ಮ ಸಂಪನ್ಮೂಲಗಳನ್ನು ಅವುಗಳಿಂದ ವಂಚಿತರಾದವರೊಂದಿಗೆ ಹಂಚಿಕೊಳ್ಳುವ ಮೂಲಕ ಆಚರಿಸಬೇಕು. ಕುರುಬರು ತಮ್ಮ ಉಡುಗೊರೆಗಳನ್ನು ಬಾಲ ಯೇಸುವಿಗೆ ಕಾಣಿಕೆಗಳನ್ನು ಅರ್ಪಿಸಿದಂತೆ ನಾವು ಅಗತ್ಯವಿದ್ದವರಿಗೆ ಸಹಾಯ ಹಸ್ತ ನೀಡಿದರೆ ಆ ದೇವದೂತರ ಹಾಡು ‘ಸದ್ಭಾವನೆಯ ಜನರಿಗೆ ಶಾಂತಿ ಅರ್ಥಪೂರ್ಣವಾಗುವುದು.
ಈ ಕ್ರಿಸ್ಮಸ್ ನಮ್ಮನ್ನು ಸಾಂಕ್ರಾಮಿಕ ರೋಗದ ಭಯದಿಂದ, ಅನಾರೋಗ್ಯದಿಂದ, ದುಃಖ ಮತ್ತು ನಿರಾಶೆಗಳಿಂದ ಮುಕ್ತಗೊಳಿಸಲಿ ಮತ್ತು ಸ್ವರ್ಗದ ಸಂತೋಷವು ನಿಮ್ಮದಾಗಲಿ ಎಂದು ಬಯಸುತ್ತೇನೆ
ನಾನು ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಆಶಿರ್ವಾದಗಳಿಂದ ಕೂಡಿದ ಕ್ರಿಸ್ಮಸ್ ಹಬ್ಬವನ್ನು ಕೋರುತ್ತೆನೆ

  • ಜೆರಾಲ್ಡ್ ಲೋಬೊ ಉಡುಪಿಯ ಬಿಷಪ್