ಕುಂದಾಪುರ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಬಿಶಪ್ ಜೆರಾಲ್ಡ್ ಲೋಬೊರವರ ಭೇಟಿ


ಜೂ.13: ಕುಂದಾಪುರ ಹೋಲಿ ರೋಜರಿ ಚರ್ಚಿನ ಅಧೀನದಲ್ಲಿರುವ ಸಂತ ಮೇರಿಸ್ ಸಮೂಹ ಶಿಕ್ಶಣ ಸಂಸ್ಥೆಯ ಶಾಲೆಗಳಾದ ಸಂತ ಮೇರಿಸ್ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆ, ಸಂತ ಮೇರಿಸ್ ಪ್ರೌಢ ಶಾಲೆ, ಹೋಲಿ ರೋe ರಿ ಆಂಗ್ಲಾ ಮಾದ್ಯಮ ಶಾಲೆ ಮತ್ತು ಸಂತ ಮೇರಿಸ್ ಪದವಿ ಪೂ.ಕಾಲೇಜಿಗೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಶಪ್ ಅ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರು ಜೂನ್ 12 ರಂದು ಭೇಟಿಯಾಗಿ ಸಭೆ ನೆಡೆಸಿದರು.
“ಶಿಕ್ಷಣ ಅಂದರೆ ಮಕ್ಕಳ ಸರ್ವಾಂಗೀಣ ಅಭಿವ್ರದ್ದಿ. ವಿದ್ಯಾರ್ಥಿಗಳು ಮಾನಸಿಕ ಬೆಳವಣಿಗೆಯನ್ನು ಪಡೆದುಕೊಳ್ಳಬೇಕು, ದೈಹಿಕವಾಗಿ ಸುಧ್ರಡವಾಗಿರಬೇಕು, ಆತ್ಮವನ್ನು ಪರಿಶುದ್ದವಾಗಿಟ್ಟುಕೊಳ್ಳಬೇಕು, ಇಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುತ್ತದೆ, ಆದರೆ ಮೌಲ್ಯ ಭರಿತ ಶಿಕ್ಷಣ ಲಭಿಸುವುದಿಲ್ಲ, ನಮ್ಮಲ್ಲಿ ಕ್ರೈಸ್ತ ಮಕ್ಕಳಿಗೆ ಕ್ರೈಸ್ತ ಶಿಕ್ಷಣ ಕೊಡಲಾಗುತ್ತೆ. ಕ್ರೈಸ್ತರೇತರ ಮಕ್ಕಳಿಗೆ ನೀತಿ ಶಿಕ್ಷಣವನ್ನು ನೀಡಲಾಗುತ್ತೆ.” ಎಂದು ತಿಳಿಸುತ್ತಾ “ನಾವು ಪರರ ಬಗೆ ಒಳಿತನ್ನೆ ಯೋಚಿಸಬೇಕು, ಅಂತೇಯೆ ಒಳಿತನ್ನೆ ಮಾಡಬೇಕು. ಪರರ ಬಗೆ ಒಳಿತನ್ನೆ ಯೋಚಿಸುತ್ತಾ, ಒಳಿತನ್ನೆ ಮಾಡಬೇಕು, ಆವಾಗ ದೇವರ ಆಶಿರ್ವಾದ ನಮ್ಮ ಮೇಲೆ ಇರುತ್ತದೆ. ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಬೇಕು ಎಂದು ಚಿಂತಿಸದರೆ ಮಾತ್ರ ಸಾಲದು, ಅದಕ್ಕೆ ಸತತವಾದ ಪ್ರಯತ್ನ ಪಡಬೇಕು. ಶಿಕ್ಷಕರೂ ಕೂಡ ಸಮಾಜದಲ್ಲಾಗುವ ಬದಲಾವಣೆಗಳನ್ನು ಗಮನಿಸಬೇಕು ಮತ್ತು ಹೊಸತನದ ಬಗ್ಗೆ ಓದಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು” ಎಂದು ಅವರು ಸಂದೇಶ ನೀಡಿದರು.
ಬಿಶಪರಿಗೆ ತಿಲಕವಿಟ್ಟು ಹೂವುಗಳನ್ನು ಅರ್ಪಿಸಿ ಆರತಿ ಎತ್ತಿ ವಿದ್ಯಾರ್ಥಿಗಳು ಬ್ಯಾಂಡು ವಾದನಗಳಿಂದ ಸಾಂಪ್ರಾದಾಯಕವಾಗಿ ಹಾಗೂ ಎನ್.ಸಿ.ಸಿ. ಕೇಡಟಗಳಿಂದ ಗೌರವಪೂರ್ವಕವಾಗಿ ಸ್ವಾಗತಿಸಿದರು


ಈ ಸಂದರ್ಭದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ,ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಹೋಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಮೇರಿಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಡೋರಾ ಡಿಸೋಜಾ, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ, ಹೋಲಿ ರೋಜಾರೀ ಆಂಗ್ಲಾ ಮಾದ್ಯಮ ಶಾಲೆಯ ಮುಖ್ಯೋಪಾದ್ಯಾಯಿನಿ ಸಿಸ್ಟರ್ ತೆರೆಜಾ ಶಾಂತಿ, ಸಂತ ಮೇರಿಸ್ ಪದವಿ ಪೂ.ಕಾಲೇಜಿನ ಪ್ರಾಂಶುಪಾಲೆ ರೇಶ್ಮಾ ಫೆರ್ನಾಂಡಿಸ್, ಎಮ್.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಉಪಸ್ಥಿತರಿದ್ದರು.
ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾದ್ಯಾಯಿನಿ ಅಸುಂಪ್ತಾ ಲೋಬೊ ಸ್ವಾಗತಿಸಿದರು. ಪ್ರಾದ್ಯಪಕ ನಾಗರಾಜ ಶೆಟ್ಟಿ ವಂದಿಸಿದರು. ದೈಹಿಕ ಶಿಕ್ಷಕ ಚಂದ್ರಶೇಖರ್ ಬೀಜಾಡಿ ನಿರೂಪಿಸಿದರು.