

ಕುಂದಾಪುರ; ಮಾಹಿತಿ ತಂತ್ರಜ್ಞಾನದಲ್ಲಿ ಜಗತ್ತೇ ಭಾರತವನ್ನು ಅವಲಂಬಿಸುವಂತೆ ಸನ್ನಿವೇಶ ಬಂದಿರುವುದು ಮಾಜಿ ಪ್ರಧಾನಿ ದಿl ರಾಜೀವ್ ಗಾಂಧಿ ಅವರ ಆಡಳಿತದ ದೂರದೃಷ್ಟಿಯ ನಿರ್ಣಯಗಳು ಮತ್ತು ಸ್ವಾತಂತ್ರ್ಯ ನಂತರದ ದಿನಗಳಲ್ಲಿ ಭೂ ಸುಧಾರಣೆಗೆ ಕೇಂದ್ರ ಸರಕಾರ ತೆಗೆದುಕೊಂಡ ನಿರ್ಣಯಗಳನ್ನು ರಾಜ್ಯದಲ್ಲಿ ದಿಟ್ಟವಾಗಿ ಜಾರಿಗೊಳಿಸಿದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಇಂದು ದೇಶಕ್ಕೆ ಮಾದರಿ ಎಂದು ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಅವರು ತಿಳಿಸಿದರು.
ಇಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಜನ್ಮ ದಿನಾಚರಣೆ ಸಭೆಯಲ್ಲಿ ಅವರು ಮಾತನಾಡಿದರು.
ಆನಗಳ್ಳಿ ಪಂಚಾಯಿತನ ಮಾಜಿ ಅಧ್ಯಕ್ಷರಾದ ಗಂಗಾಧರ್ ಶೆಟ್ಟಿ ಅವರು ಅಗಲಿದ ನಾಯಕರನ್ನು ನೆನಪಿಸಿಕೊಂಡು ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ,ಪುರಸಭಾ ಸದಸ್ಯರಾದ ಚಂದ್ರಶೇಖರ್ ಖಾರ್ವಿಯವರು ವಹಿಸಿದ್ದರು.
ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ,ಬ್ಲಾಕ್ ಕಾಂಗ್ರೆಸ್ ಉಪ ಸಮಿತಿಗಳ ಅಧ್ಯಕ್ಷರಾದ ಅಶ್ವಥ್ ಕುಮಾರ್ ,ಧರ್ಮಪ್ರಕಾಶ್ , ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ರೋಷನ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಸುನಿಲ್ ಪೂಜಾರಿ, ಕೇಶವ್ ಭಟ್, ಅಭಿಜಿತ್ ಪೂಜಾರಿ , ಅಶೋಕ್ ಸುವರ್ಣ, ಜ್ಯೋತಿ ನಾಯ್ಕ್ ,ಆಲ್ಡ್ರಿನ್ ಡಿಸೋಜಾ, ಆನಂದ ಪೂಜಾರಿ, ಸದಾನಂದ ಖಾರ್ವಿ, ಮಧುಕರ, ನಾಗರಾಜ್ ನಾಯ್ಕ, ಸೀಮಾ ಚಂದ್ರ ಪೂಜಾರಿ , ದಿನೇಶ್ ಬೆಟ್ಟ, ಕೆ ಪಿ ಅರುಣ್ ಪಟೇಲ್, ಜ್ಯೋತಿ ಎನ್ , ಪ್ರೀತಮ್ ಕರ್ವಾಲ್ಲೊ, ಮೆಬಲ್ ಡಿಸೋಜಾ , ಕೆ ಸುರೇಶ್, ನಿತಿನ್ ಡಿಸೋಜಾ, ವಿವೇಕಾನಂದ, ಪ್ರೇಮ ಕೋತ, ಸುಧೀಂದ್ರ ಇನ್ನಿತರರು ಉಪಸ್ಥಿತರಿದ್ದರು.
ಮಹಿಳಾ ಅಧ್ಯಕ್ಷೆ ದೇವಕಿ ಸಣ್ಣಯ್ಯ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿ, ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ ವಂದಿಸಿದರು.





