ಬರ್ಮಿಂಗ್ಸ್ಯಾಮ್; ಜುಲೈ 29 ರಿಂದ ಆರಂಭಗೊಂಡಿದ್ದ ಕಾಮನ್ ವೆಲ್ತ್ ಗೇಮ್ಸ್ ಇಂದು ಮುಕ್ತಾಯಗೊಂಡಿತು. ಭಾರತೀಯ ಆಟಗಾರರು ಈ ಬಾರಿ ಅದ್ಭುತ ಪ್ರದರ್ಶನ: ನೀಡುವ ಮೂಲಕ ಒಟ್ಟು 63 ಷದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಸಲದ ಕಾಮನ್ದೆಲ್ಪ್ ಗೇಮ್ಸ್ನಲ್ಲಿ ಭಾರತ ಒಟ್ಟು 22 ಚಿನ್ನ, 16 ಬೆಳ್ಳಿ ಹಾಗೂ 23 ಕಂಚು ಸೇರಿದಂತೆ ಒಟ್ಟು 61 ಪದಕ ಸಂಪಾದಿಸಿ ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ.
ಇಂಗ್ಲೆಂಡ್ನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಪುರುಷರ ಹಾಕಿಯಲ್ಲಿ ಭಾರತ ಬೆಳ್ಳಿ ಗೆಲ್ಲುವುದರೊಂದಿಗೆ ದೇಶದ ಕ್ರೀಡಾಪಟುಗಳು ಕಾಮನ್ವೆಲ್ತ್ ಗೇಮ್ಸ್ ಅಭಿಯಾನ ಅಂತ್ಯಗೊಳಿಸಿದ್ದಾರೆ.
ಈ ಸಲದ ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಕುಂದಾಪುರದವರಾದ ವೆಯ್ಟ್ ಲಿಪ್ಟರ್ ಗುರುರಾಕ್ ಪೂಜಾರಿ 61 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದು, ಕುಂದಾಪುರದ ಹೆಸರನ್ನು ಮತ್ತೊಮ್ಮೆ ಅಂತರಾಷ್ಟೀಯ ಮಟ್ಟದಲ್ಲಿ ಎತ್ತರಕ್ಕೆ ಎರಿಸಿದ್ದಾರೆ, ಕಳೆದ 2018 ರ ಕಾಮನ್ ವೆಲ್ತ್ ಗೇಮ್ಸನಲ್ಲಿ ಗುರುರಾಜ್ 56 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಕುಂದಾಪುರಕ್ಕೆ ಕೀರ್ತಿ ತಂದಿದ್ದರು.