ಬೀಜಾಡಿ: ಸ್ವಚ್ಚತೆಯ ಅರಿವು ಎಲ್ಲರಲ್ಲೂ ಮೂಡಿದಾಗ ಸ್ವಚ್ಚ ಸುಂದರ ನೈರ್ಮಲ್ಯ ಗ್ರಾಮ ನಿರ್ಮಾಣ ಸಾಧ್ಯ ಎಂದು ಬೀಜಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಪೂಜಾರಿ ಹೇಳಿದರು.
ಅವರು ಭಾನುವಾರ ಸ್ವಚ್ಛತಾ ಹಿ ಸೇವಾ ಆಂದೋಲದ ಅಂಗವಾಗಿ ಬೀಜಾಡಿ ಗ್ರಾಮ ಪಂಚಾಯಿತಿ, ಬೀಜಾಡಿ ಗೋಪಾಡಿ ಮಿತ್ರ ಸಂಗಮ, ಟಿಪ್ ಸೆಶನ್ ಚಾರಿಟೇಬಲ್ ಟ್ರಸ್ಟ್, ಸಂಜೀವಿನಿ ಸ್ವಸಹಾಯ ಸಂಘ, ಎಸ್‍ಎಲ್‍ಎಂಆರ್ ಘಟಕದ ಆಶ್ರಯದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಂತರ ಕೋಟೇಶ್ವರದ ಮಾಲ್ ಸಮೀಪದಿಂದ ಸರ್ವಿಸ್ ರಸ್ತೆ ಮೂಲಕ ಕೋಟೇಶ್ವರ ಗ್ರಾಮ ಪಂಚಾಯಿತಿ ವರೆಗೆ ಮಾನವ ಸರಪಳಿ ನಡೆಸಿ ಜಾಗೃತಿ ಮೂಡಿಸಲಾಯಿತು. ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಜಿನಾ ಜೂಲಿ, ಸದಸ್ಯರಾದ ಬಿ.ವಾದಿರಾಜ್ ಹೆಬ್ಬಾರ್, ಶೇಖರ ಛಾತ್ರಬೆಟ್ಟು, ಸುಮತಿ ನಾಗರಾಜ್,ಚಂದ್ರ ಬಿ.ಎನ್, ವಿಶ್ವನಾಥ ಮೊಗವೀರ, ಅನಿಲ್ ಛಾತ್ರಬೆಟ್ಟು, ಪೂರ್ಣಿಮಾ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಗಣೇಶ್, ಸಿಬ್ಬಂದಿ ನಾರಾಯಣ, ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ಸಂಜೀವಿನಿ ಸ್ವಸಹಾಯ ಸಂಘದ ಗೀತಾ ಮೊದಲಾದವರು