ಶ್ರೀನಿವಾಸಪುರ; ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ಭಾರತಿ ಅವಿರೋಧವಾಗಿ ಆಯ್ಕೆ

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 282.14948; hist255: 0.0; hist252~255: 0.0; hist0~15: 0.0;

ಶ್ರೀನಿವಾಸಪುರ; ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ಭಾರತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಉಪವಿಭಾಗಾಧಿಕಾರಿ ವಿ. ಸೋಮಶೇಖರ್ ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಈ ಸ್ಥಾನಕ್ಕೆ ಭಾರತಿ, ಕೆ. ಬಿ. ಸುಗಣ ಇಬ್ಬರು ನಾಮಪತ್ರ ಸಲ್ಲಿಸಿದರು. ಇದರಲ್ಲಿ ಕೆ. ಬಿ. ಸುಗಣ ನಾಮಪತ್ರ ವಾಪಸ್ ತೆಗೆದುಕೊಂಡಿದ್ದರಿಂದ ಭಾರತಿ ಕಣದಲ್ಲಿ ಉಳಿದಿರುವುದರಿಂದ ಇವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದರು.
ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರಿದ್ದು, ಇದರಲ್ಲಿ ಜೆಡಿಎಸ್ 9 ಕಾಂಗ್ರೇಸ್ 8 ಸದಸ್ಯರಿದ್ದು, ಈ ಉಪಾಧ್ಯಕ್ಷರ ಚುನಾವಣೆಯಲ್ಲಿ 9 ಜನ ಜೆಡಿಎಸ್ ಸದಸ್ಯರು ಹಾಜರಿದ್ದರು. ಕಾಂಗ್ರೇಸ್‍ನ 8 ಜನ ಸದಸ್ಯರು ಸಭೆಗೆ ಗೈರು ಹಾಜರಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಣಾಧಿಕಾರಿ ಎಸ್ ಆನಂದ್ ಜಿಲ್ಲಾ ಪಂಚಾಯತಿ ಸದಸ್ಯ ತೂಪಲ್ಲಿ ಆರ್ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಜಿ. ನರಸಿಂಹಯ್ಯ ಸದಸ್ಯರಾದ ಗೊಟ್ಟುಕುಂಟೆ ಕೃಷ್ಣಾರೆಡ್ಡಿ, ರಾಜಶೇಖರ್‍ರೆಡ್ಡಿ, ಮಂಜುನಾಥರೆಡ್ಡಿ, ರಾಧಮ್ಮ, ಕೆ. ಮಂಜುಳ, ಜಿ.ವಿ. ಬಾಲಾವತಿ, ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೊರ್ನಹಳ್ಳಿ ಎಂ. ಆಂಜಪ್ಪ ಮುಖಂಡರಾದ ಕಾಡುದೇವಂಡಹಳ್ಳಿ ರಾಮಚಂದ್ರೇಗೌಡ, ರಾಜಣ್ಣ, ಗೌಡತಾತಗಡ್ಡ ಜಯರಾಮ್, ಆರ್. ನಾರಾಯಣಸ್ವಾಮಿ, ಆರಿಕುಂಟೆ ಲಕ್ಷ್ಮಣರೆಡ್ಡಿ, ತಿಮ್ಮರಾಯಪ್ಪ, ಇನ್ನಿತರರು ಹಾಜರಿದ್ದರು.

filter: 0; fileterIntensity: 0.0; filterMask: 0; module: h; hw-remosaic: 0; touch: (-1.0, -1.0); modeInfo: ; sceneMode: NightHDR; cct_value: 0; AI_Scene: (-1, -1); aec_lux: 294.12836; hist255: 0.0; hist252~255: 0.0; hist0~15: 0.0;