ಶ್ರೀನಿವಾಸಪುರ : ಭಾರತ ವಿದ್ಯಾರ್ಥಿ ಪಡರೇಷನ್ ಎಸ್ ಎಫ್ ಐ ಶ್ರೀನಿವಾಸಪುರ ತಾಲ್ಲೂಕು ಸಮಿತಿ ವತಿಯಿಂದ 2020 ಎನ್ಇಪಿ ಜಾರಿಯಾದ ನಂತರ ಇಲ್ಲಿಯವರೆಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಕ ಪಟ್ಟಿಗಳನ್ನು ವಿತರಿಸುವಂತೆ ಒತ್ತಾಯಿಸಿ. ಗುರುವಾರ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಫ್ ಐ ಜಿಲ್ಲಾ ಕಾರ್ಯದರ್ಶಿಯಾದ ಸುರೇಶ್ ಬಾಬು ಮಾತನಾಡಿ. ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್.ಎಫ್.ಐ) ಜಿಲ್ಲಾ ಸಮಿತಿ ಈ ಮೂಲಕ ತಮ್ಮಲ್ಲಿ ಒತ್ತಾಯಿಸುವುದೇದರೆ , ರಾಜ್ಯದಲ್ಲಿ ಎನ್ಇಪಿ 2020 ಜಾರಿಯಾದ ನಂತರ ಸುಮಾರು 22 ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಸುಮಾರು 51 ಲಕ್ಷಕ್ಕೂ ಹೇಳು ಹೆಚ್ಚು ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆ ಮಾಡಿರುವುದಿಲ್ಲ.
ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದಲ್ಲಿ ಎನ್ಇಪಿ ರದ್ದುಗೊಳಿಸಿ ಎಸ್ಇಪಿ ಜಾರಿಗೊಳಿಸಿದೆ ಆದರೆ ಎಸ್ಇಪಿ ವಿದ್ಯಾರ್ಥಿಗಳಿಗೂ ಸಹ ಅಂಕಪಟ್ಟಿ ಸಿಗುತ್ತಿಲ್ಲ. ಉನ್ನತ ವಿದ್ಯಾಭ್ಯಾಸಕ್ಕೆ ಅಂಕ ಪಟ್ಟಿ ಬೇಕಾಗಿರುವ ಕಾರಣ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳ ಹತ್ತಿರ ಹೋಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ.
ವಿಶ್ವವಿದ್ಯಾನಿಲಯದ ಬಳಿ ವಿದ್ಯಾರ್ಥಿಗಳು ಅಂಕಪಟ್ಟಿ ಕೇಳಿಕೊಂಡು ಹೋದರೆ ಡಿಜಿ ಲಾಕರ್ ನಲ್ಲಿ ಅಂಕಪಟ್ಟಿ ತೆಗೆದುಕೊಳ್ಳಿ ಎಂದು ತಿಳಿಸುತ್ತಿದ್ದಾರೆ ಆದರೆ ಡಿಜಿ ಲಾಕರ್ ನಲ್ಲಿಯೂ ಸಹ ಅಂಕಪಟ್ಟಿ ಸಿಗುತ್ತಿಲ್ಲ ವಿದ್ಯಾರ್ಥಿಗಳು ಕೇಳಿದರೆ ತಾಂತ್ರಿಕ ಸಮಸ್ಯೆ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತಾರೆ.
ನಂತರ ಎಸ್ಎಫ್ಎಸ್ ಜಿಲ್ಲಾ ಉಪಾಧ್ಯಕ್ಷರಾದ ಉದಯ್ ಕುಮಾರ್ ಮಾತಾಡಿ.
ಎನ್ಇಪಿ ಯಲ್ಲಿ ಆನ್ಲೈನ್ ಅಂಕಪಟ್ಟಿ ಜೊತೆಗೆ ಮುದ್ರಿತಾ ಅಂಕಪಟ್ಟಿ ನೀಡಬೇಕೆಂದು ಇದೆ. ಅದಲ್ಲದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಮಾನ್ಯ ರಾಜ್ಯಪಾಲರು 22-12-2022 ರಂದು ಎಲ್ಲಾ ವಿಶ್ವವಿದ್ಯಾನಿಲಯಗಳು ಮುದ್ರಿತಾ ಅಂಕಪಟ್ಟಿ ವಿತರಿಸಬೇಕೆಂದು ಆದೇಶ ನೀಡಿದ್ದರು ಸಹ ವಿಶ್ವವಿದ್ಯಾನಿಲಯಗಳು ಪಾಲಿಸುತ್ತಿಲ್ಲ. ಆದರಿಂದ
ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶ ಮಾಡಿ ಅಂಕಪಟ್ಟಿ ವಿತರಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಈ ಮೂಲಕ ರಾಜ್ಯ ಸರ್ಕಾರವನ್ನು ಒತ್ತಾಯ ಮಾಡುತ್ತೇವೆ. ಜೊತೆಗೆ ಅಂಕಪಟ್ಟಿ ವಿತರಣೆಯಲ್ಲಿ ಸುಮಾರು 200 ಕೋಟಿ ಹಣ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಾಣುತ್ತದೆ. ಆದರಿಂದ ಅಂಕ ಪಟ್ಟಿ ವಿತರಣೆಗೆ ಸಂಬಂದಿಸಿದಂತೆ ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಎಸ್ ) ಒತ್ತಾಯ ಮಾಡುತ್ತದೆ ಎಂದರು.
ಹಾಕ್ಕೋತಾಯಗಳು
1) 51 ಲಕ್ಷ ವಿದ್ಯಾರ್ಥಿಗಳಿಗೆ ತಕ್ಷಣ ಮುದ್ರಿತಾ ಅಂಕಪಟ್ಟಿ ವಿತರಿಸಬೇಕು.
2) ಯುಸಿಸಿಎಂಎಸ್ ರದ್ದುಗೊಳಿಸಬೇಕು.
3) ಅಂಕಪಟ್ಟಿ ವಿತರಣೆಯಲ್ಲಿ ಹಣ ದುರ್ಬಳಕೆ ಆಗಿದೆ ಆದರಿಂದ ಉನ್ನತ ಮಟ್ಟದ ತನಿಖೆಯಾಗಬೇಕು.
4)ನಿಗದಿತ ಸಮಯದಲ್ಲಿ ಫಲಿತಾಂಶ ಕೊಡಬೇಕು.
5) ಪದವಿ ಮುಗಿಸಿ ಮುಂದಿನ ಬಿ ಎಡ್ ವಿದ್ಯಾಭ್ಯಾಸ ಕ್ಕೆ ಅಂಕಪಟ್ಟಿ ಮೇಲೆ ಕುಲ ಸಚಿವರ ಸಹಿ ಮತ್ತು ಮೊಹರು ಅವಶ್ಯ ಅದಕ್ಕೆ ವಿಜಾಪುರ ವಿವಿ ಅವರು ವಿದ್ಯಾರ್ಥಿಗಳಿಗೆ ಸರಿಯಾಗಿ ಸ್ಪಂದನೆ ಮಾಡವುದಿಲ್ಲ. ಬೆಳೆಗ್ಗೆ ರಾತ್ರಿ ವರೆಗೂ ಕಾಯುವ ಸ್ಥಿತಿ ಇದೆ. ಕೊಡಲೇ ವಿದ್ಯಾರ್ಥಿಗಳಿಗೆ ಸಹಿ ಕಲಳಿಸಬೇಕು
ಈ ಸಂದರ್ಭದಲ್ಲಿ ಎಸ್ ಎಫ್ ಐ ತಾಲ್ಲೂಕು ಕಾರ್ಯದರ್ಶಿಯಾದ ಶ್ರೀಹರಿ, ತಾಲ್ಲೂಕುಸಹಕಾರ್ಯದರ್ಶಿ ಯಾದ ನವೀನ್, ರಾಜು, ಪ್ರವೀಣ್, ಗಗನ ಶ್ರೀ, ಪುನೀತ್, ಅಧಿಕೇಶವ, ಭಾರ್ಗವ್ ಅರ್ಚನಾ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.