ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತುಬದ್ಧ ಸೇವಾ ಸಂಸ್ಥೆ, ಅಗತ್ಯ ಸಂದರ್ಭಗಳಲ್ಲಿ ಗಣನೀಯ ಸೇವೆಯ ಮೂಲಕ ಸಮಾಜದ ಗೌರವಕ್ಕೆ ಪಾತ್ರವಾಗಿದೆ : ಪ್ರಾಂಶುಪಾಲೆ ಆರ್.ಮಾಧವಿ

ಶ್ರೀನಿವಾಸಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಒಂದು ಶಿಸ್ತುಬದ್ಧ ಸೇವಾ ಸಂಸ್ಥೆಯಾಗಿದೆ. ಅಗತ್ಯ ಸಂದರ್ಭಗಳಲ್ಲಿ ಗಣನೀಯ ಸೇವೆ ಮಾಡುವುದರ ಮೂಲಕ ಸಮಾಜದ ಗೌರವಕ್ಕೆ ಪಾತ್ರವಾಗಿದೆ ಎಂದು ಪ್ರಾಂಶುಪಾಲೆ ಆರ್.ಮಾಧವಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ಭಗತ್‍ಸಿಂಗ್ ರೋವರ್ಸ್ ಕ್ರೂ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಈ ಸೇವಾ ಸಂಸ್ಥೆಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವಲ್ಲಿ ಉಪನ್ಯಾಸಕರು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಶಿಕ್ಷಕ ಟಿ.ಎಂ.ರಾಮಕೃಷ್ಣೇಗೌಡ ಮಾತನಾಡಿ, ಈ ಸಂಸ್ಥೆ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಮತ್ತು ಯುದ್ಧ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಸಂತ್ರಸ್ತರ ಸೇವೆ ಮಾಡುತ್ತದೆ. ವಿದ್ಯಾರ್ಥಿಗಳು ಸೇವಾ ಮನೋಭಾವದಿಂದ ಸಂಸ್ಥೆಗೆ ಸೇರಬೇಕು. ಮಾದರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ರವಿಕುಮಾರ್, ವಿ.ಎಂ.ನಾರಾಯಣಸ್ವಾಮಿ, ವಿನಯ್ ಕುಮಾರ್, ಟಿ.ರಮೇಶ್, ಬೈರಾರೆಡ್ಡಿ, ಶೇಷಗಿರಿ, ಪಿ.ಗಂಗಾಧರ್, ಜಿ.ಸಿ.ಸರಸ್ವತಮ್ಮ, ಜಿ.ಟ್ರಿಣಾವತಿ, ಸೌಭಾಗ್ಯಮ್ಮ, ಚಂದ್ರಶೇಖರ್, ವಿಜಯ್ ಕುಮಾರ್, ಸಾಥಿಯೋ, ಪಾಪಿರೆಡ್ಡಿ, ಬೀರಪ್ಪ ಇದ್ದರು.