ಕುಂದಾಪುರ,ಎ.25: ಎಪ್ರಿಲ್ 24 ರ ಸಂಜೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅವರು, ಕುಂದಾಪುರದ ನಗರ ಭಾಗದಲ್ಲಿ ತಮ್ಮ ಬೆಂಬಲಿಗರಿಂದ ಬ್ರಹತ್ ಮೆರವಣಿಗೆ ಮಾಡಿದರು. ಅವರು ಶಾಸ್ತ್ರಿ ವ್ರತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಹೋಗಿ ಅಲ್ಲಿಂದ ಮತ್ತೊಂದು ದಿಕ್ಕಿನ ಮುಖ್ಯ ರಸ್ತೆಯಿಂದ ವಾಪಸು ಬಂದು ಶಾಸ್ತ್ರಿ ಪಾರ್ಕಿನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು.
ನನ್ನ ತವರು ಕುಂದಾಪುರ, ಹುಟ್ಟಿದ್ದು ಕಾರ್ಕಳದಲ್ಲಿ ರಾಜಕೀಯವಾಗಿ ಬೆಳೆದದ್ದು ಬ್ರಹ್ಮಾವರದಲ್ಲಿ, ಅಂದರೆ ಈ ಭಾಗದ ಜನರ, ಪ್ರದೇಶದ ಸಮಸ್ಯೆಗಳನ್ನು ಬಲ್ಲವನು, ನನಗೆ ಇಲ್ಲಿ ಕಡಿಮೆ ಅವಕಾಶ ಸಿಕಿದರೂ ನಾನು ಹೆಚ್ಚಿನ ಅಭಿವ್ರದ್ದಿಯನ್ನು ಸಾಧಿಸಿದ್ದೇನೆ, ಈ ಸಲ ನನಗೆ ಪೂರ್ಣವಕಾಶ ದೊರೆತರೆ ನಾನು ಅಭಿವ್ರದಿ ಏನೆಂದು ತೋರಿಸುತ್ತೇನೆ ಅದಕ್ಕೆ ಅವಕಾಶ ಮಾಡಿಕೊಡಿ. ಸಮಯ ಅವಕಾಶ ದೊರೆತವರು ಏನು ಮಾಡಿದ್ದಾರೆ ಎಂದು ನಿಮಗೆಲ್ಲ ಗೊತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಲು, ಜನರ ನಡುವೆ ಇದ್ದು ಕೆಲಸ ಮಾಡಲು ಅವಕಾಶ ಕೊಡಿ. ಜಯಪ್ರಕಾಶ್ ಹೆಗ್ಡೆ ಹೇಳಿದರು.
ಕುಂದಾಪುರ ನಗರದಲ್ಲಿ ಸಭೆ ನಡೆಸಲು ಈವರೆಗೆ ಅನುವು ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಪಾದಯಾತ್ರೆ ನಡೆಸಿದ್ದೇನೆ
ನಗರ ಇಬ್ಭಾಗ ಆಗದಂತೆ ಫ್ಲೈಓವರ್ ಮಾಡಿಕೊಡಲಾಗಿದೆ. ಅಂತೆಯೇ ಸೀವಾಕ್ ಮೊದಲಾದ ರಚನೆಗಳಾಗಿವೆ. ಕುಂದಾಪುರ ಪ್ರವಾಸೋದ್ಯಮವಾಗಿ ಅಭಿವೃದ್ಧಿ ಆಗಲು ನನಗೆ ಮತ ನೀಡಿ. ಈ ಹಿಂದೆ ಅಧಿಕಾರವಿದ್ದಾಗ ನನ್ನ ಕ್ರಿಯಾಶೀಲತೆ, ಅಭಿವೃದ್ಧಿ ವೇಗವನ್ನು ಜನರು ನೋಡಿದ್ದಾರೆ. ಈ ಬಾರಿ ಮತ್ತೂಮ್ಮೆ ಅವಕಾಶ ನೀಡಿದರೆ ಅದೇ ಕ್ರಿಯಾಶೀಲತೆಯೊಂದಿಗೆ ನಿಮ್ಮ ಸೇವೆ ಮಾಡುವೆ ಎಂದು ಹೆಗ್ಡೆ ಹೇಳಿದರು.
ಜಯಪ್ರಕಾಶ್ ಹೆಗ್ಡೆ ಗೆದ್ದರೆ ನಮ್ಮ ಜೆಲ್ಲೆಯಲ್ಲಿ ಕಾಂಗ್ರೆಸ್ ಶಾಸಕರಿಲ್ಲ ಎನ್ನುವ ನೋವು ದೂರವಾಗಲಿದೆ. ಉಡುಪಿ ಜಿಲ್ಲೆಗೊಂದು ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಸ್ಥಾಪನೆಯಾಗಲಿದೆ. ಕೈಗಾರಿಕೆ ವಲಯ, ಕಂಪೆನಿಗಳು ಸ್ಥಾಪನೆಯಾಗಿ ಯುವ ಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಮೂಲಕ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆ ಹರಿದುಬರಲಿದೆ. ಆದ್ದರಿಂದ ಹೆಗ್ಡೆ ಗೆಲುವು ಕ್ಷೇತ್ರದ ಜನರಿಗೆ, ನಮ್ಮ ನಿಮ್ಮಲ್ಲರಿಗೆ ಅಗತ್ಯವಿದೆ ಹಾಗೂ ಚುನಾವಣೆ ಸಂದರ್ಭ ಜನರ ಆಕ್ರೋಶ ಎದುರಿಸಲಾಗದೆ ಅರೆಬರೆ ಕಾಮಗಾರಿ ಮುಗಿಸಿ ಕಲ್ಯಾಣಪುರ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದಾರೆ. ಚುನಾವಣೆ ಮುಗಿಯುತ್ತಿದ್ದಂತೆ ರಸ್ತೆಯ ನಿಜಬಣ್ಣ ಬಯಲಾಗಲಿದೆ ಹಾಗೂ ಈ ಬಾರಿ ಮಳೆಗಾಲದಲ್ಲಿ ಸಂಚಾರಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಮಾಜಿ ಶಾಸಕರಾದ ಗೋಪಾಲ ಪೂಜಾರಿ ವಿರೋಧ ಪಕ್ಷದವರು ನನ್ನನ್ನು ಭಯೊತ್ಪಾದಕ ಎಂದು ಹೇಳಿದವರು ಅವರು ಯಾವತ್ತು ಸುಳ್ಳು ಹೇಳುವದೇ ಅವರ ಕಾಯಕವಾಗಿದೆ; ಎಂದು ಆಕ್ರೋಶ ಹೊರಹಾಕಿದರು.
ಬಿ.ಎಂ. ಸುಕುಮಾರ ಶೆಟ್ಟಿ, ಮುಖಂಡರಾದ ಎಂ.ಎ. ಗಫೂರ್, ಜಿ.ಎ. ಬಾವಾ, ಕಿಶನ್ ಹೆಗ್ಡೆ ಕೊಳ್ಕೆಬೈಲು ಇವರು ಮಾತನಾದಿದರು. ಎಸ್. ರಾಜು ಪೂಜಾರಿ, ದೇವಾನಂದ ಶೆಟ್ಟಿ ಹಳ್ನಾಡು, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ಹೆರಿಯಣ್ಣ, ಅಶೋಕ್ ಪೂಜಾರಿ ಬೀಜಾಡಿ ಮೊದಲಾದವರು ಇದ್ದರು.