ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆಯು 2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು 12 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳನ್ನು ಹಾದು, ಆ ಮೂಲಕ 3970 ಕಿಲೋಮೀಟರ್ಗಳಷ್ಟು ದೂರವನ್ನು ಕ್ರಮಿಸಿ ಇಂದು ಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪಗೊಳ್ಳುವ ಅಂಗವಾಗಿ ಇಂದು ದೇಶದಾದ್ಯಂತ ರಾಜ್ಯ, ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ರಾಷ್ಟ್ರಧ್ವಜ ಆರೋಹಣ ಕಾರ್ಯಕ್ರಮ ಆಯೋಜಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಕರೆನೀಡಿದ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ 10ಗಂಟೆಗೆ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾಂಗ್ರೆಸ್ ಸೇವಾದಳದ ನೇತೃತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿಯವರು ಧ್ವಜಾರೋಹಣ ವನ್ನು ನೆರೆವೇರಿಸಿದರು.
ಈ ಸಂಧರ್ಭದಲ್ಲಿ ವಿಧಾನ ಸಭಾ ಚುನಾವಣಾ ಸ್ಪರ್ಧಾಕಾಂಕ್ಷಿಗಳಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಶ್ಯಾಮಲಾ ಭಂಡಾರಿ, ಕೊಳ್ಕೆಬೈಲು ಕಿಶನ್ ಹೆಗ್ಡೆ, ಕೆಪಿಸಿಸಿ ಐಟಿ ಸೆಲ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ವಿಕಾಸ್ ಹೆಗ್ಡೆ, ನಗರ ಕಾಂಗ್ರೆಸ್ ಅಧ್ಯಕ್ಷ ಗಣೇಶ ಶೇರೆಗಾರ್, ಹಿರಿಯ ಕಾಂಗ್ರೆಸಿಗರಾದ ಬಳ್ಕೂರು ಕ್ರಷ್ಣಯ್ಯ ಶೆಟ್ಟಿ, ಬಿ. ಹಾರೂನ್ ಸಾಹೇಬ್, ಸುಭಾಷ್ ಪೂಜಾರಿ, ಅಬ್ದುಲ್ಲಾ ಕೋಡಿ, ಅಶೋಕ್ ಸುವರ್ಣ, ಆಶಾ ಕರ್ವಾಲೋ, ಕೇಶವ ಭಟ್, ಅಡಾಲ್ಫ್ ಡಿಕೋಸ್ಟಾ, ಹೇರಿಕುದ್ರು ಗಂಗಾಧರ ಶೆಟ್ಟಿ, ಚಂದ್ರಕಾಂತ್ ನಾಯ್ಕ್, ಧರ್ಮಪ್ರಕಾಶ್, ಪ್ರಭಾಕರ ಶೇರೆಗಾರ್, ಮೌರೀಶ್ ಕರ್ವಾಲೋ, ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಎಂ.ಅಶ್ಪಾಕ್, ಯುವ ಮುಖಂಡರಾದ ಕೋಡಿ ಸುನಿಲ್ ಪೂಜಾರಿ, ರಂಜಿತ್ ಭಂಡಾರಿ, ಶಿಶಿರ, ಮುನಾಫ್ ಕೋಡಿ, ಅಭಿಜಿತ್ ಪೂಜಾರಿ, ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಜಿಲ್ಲಾಧ್ಯಕ್ಷ ರೋಷನ್ ಶೆಟ್ಟಿ, ಎನ್ಎಸ್ಯುಐ ತಾಲೂಕು ಮುಖಂಡ ಸುಜನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರ್ವಹಿಸಿದರು. ಸೇವಾದಳದ ಕುಮಾರ ಖಾರ್ವಿ ಸ್ವಾಗತಿಸಿದರು. ಜ್ಯೋತಿ ನಾಯ್ಕ್ ವಂದಿಸಿದರು.