ಭಂಡಾರ್ಕಾರ್ಸ್ – ಪ್ರದಾನ ಮಂತ್ರಿ ಜನೌಷಧಿ ಕೇಂದ್ರದ ಸಹಯೋಗದಲ್ಲಿ “ಸುವಿಧಾ ಪ್ಯಾಡ್ ಕ್ರಾಂತಿ ಆಚರಣೆ”

JANANUDI.COM NETWORK


ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್‍ಕಾಲೇಜಿನಲ್ಲಿ ಮಹಿಳಾ ವೇದಿಕೆ ಮತ್ತು ಕುಂದಾಪುರದ ಪ್ರದಾನ ಮಂತ್ರಿ ಜನೌಷಧಿ ಕೇಂದ್ರದದ (ಕುಮದಾಪುರ ರೆಡ್‍ಕ್ರಾಸ್ ಘಟಕ) ಸಹಯೋಗದಲ್ಲಿ“ಸುವಿಧಾ ಪ್ಯಾಡ್ ಕ್ರಾಂತಿ ಆಚರಣೆ” ಪ್ರಯುಕ್ತ ಉಚಿನ ಸ್ಯಾನಿಟರಿ ಪ್ಯಾಡ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರ ರೆಡ್‍ಕ್ರಾಸ್ ಘಟಕ ಸಭಾಪತಿಗಳಾದ ಕೆ.ಜಯಕರ ಶೆಟ್ಟಿಅವರು ಮಹಿಳೆಯರಲ್ಲಿ ಪ್ಯಾಡ್ ಬಳಕೆ ಮುಖ್ಯವಾಗುತ್ತದೆ. ಶಾಲಾ ಕಾಲೇಜುಗಳಲ್ಲಿ ಅದರ ಕುರಿತುಅರಿವು ಮೂಡಿಸಬೇಕುಎಂದು ಹೇಳಿದರು.
ಕುಂದಾಪುರದ ರೆಡ್‍ಕ್ರಾಸ್ ಘಟಕದ ಸದಸ್ಯೆ ಡಾ.ಸೋನಿ ಡಿಕೋಸ್ತಾ, ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಪ್ಯಾಡ್ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ಮಹಿಳಾ ವೇದಿಕೆಯ ಸಂಚಾಲಕರಾದ ಡಾ.ಯಶವಂತಿ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಯಜುಶಾ ಕಾರ್ಯಕ್ರಮ ನಿರ್ವಹಿಸಿ, ಸ್ವಾಗತಿಸಿ ವಂದಿಸಿದರು.