

ಕುಂದಾಪುರ: ಜೂನ್ 21ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜು ಮತ್ತು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಘಟಕದ ಸಹಭಾಗಿತ್ವದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಯೋಗದ ಅಗತ್ಯ ಮತ್ತು ಮಹತ್ವದ ಕುರಿತಾಗಿ ಉಪನ್ಯಾಸ ಮತ್ತು ಯೋಗದ ವಿವಿಧ ಆಯಾಮಗಳ ಬಗ್ಗೆ ವಿದ್ಯರ್ಥಿಗಳಲ್ಲಿ ಅರಿವು ಮೂಡಿಸಲು ಸಂಪನ್ಮೂಲ ವ್ಯಕ್ತಿಯಾಗಿ ಉಡುಪಿಯ ಆರ್ಟ್ಸ್ ಆಫ್ ಲೀವಿಂಗ್ ಸಂಸ್ಥೆಯ ಶೈಲಜ ಅವರು ಮಾತನಾಡಿ ಸಧೃಡ ಆರೋಗ್ಯಕ್ಕಾಗಿ ಧ್ಯಾನ,ಏಕಾಗ್ರತೆಯನ್ನು ಬೆಳೆಸಿಕೊಳ್ಳಿ,ಹಾಗೂ ಉಸಿರಾಟದ ವಿವಿಧ ಆಯಾಮಗಳನ್ನು ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಪರಿಚಯಿಸುತ್ತ, ಶಾಂತಿದಾಯಕ,ನೆಮ್ಮದಿ,ತೃಪ್ತಿಯ ಬದುಕಿಗೆ ಯೋಗ ದಾರಿದೀಪ ಎಂದು ನುಡಿದರು. ಆರ್ಟ್ ಆಫ್ ಲೀವಿಂಗ್ ಕುಂದಾಪುರ ಘಟಕದ ಮಂಜುಶ್ರೀ ಹಾಗೂ ಷಣ್ಮುಖ ಇವರುಗಳು ವಿದ್ಯಾರ್ಥಿಗಳಿಗೆ ಚಟುವಟಿಕೆದಾಯಕವಾದ ವಿವಿಧ ರೀತಿಯ ಯೋಗ ಭಂಗಿಗಳನ್ನು ಪರಿಚಯಿಸಿದರು.
ಈ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಪ್ರಾಧ್ಯಾಪಕಿ ಡಾ.ಸರೋಜ ಎಂ., ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕದ ಯೋಜನಾಧಿಕಾರಿಗಳಾದ. ಅರುಣ್.ಎಸ್ ,
ರಾಮಚಂದ್ರ ಆಚಾರಿ, ಮತ್ತು ಎನ್.ಸಿ.ಸಿ ಅಧಿಕಾರಿಗಳಾದ ಶರಣ್,ಅಂಜನ್ ಹಾಗೂ ಎಲ್ಲಾ ಬೋಧಕ ವೃಂದದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ರೇಣುಕಾ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
