


ಕುಂದಾಪುರ: ನವೆಂಬರ್ 2ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಗ್ರಂಥಾಲಯದಲ್ಲಿ ” ನವೆಂಬರ್ 1ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಸಾಹಿತ್ಯ ಮತ್ತು ಸಾಹಿತಿಗಳ ಪುಸ್ತಕಗಳ ಪ್ರದರ್ಶನ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಅವರು ಮಾತನಾಡಿ ಕನ್ನಡ ನಮ್ಮ ಭಾಷೆ. ಎಲ್ಲಾ ತಾಯಂದಿರನ್ನು ಪ್ರೀತಿಸಿ ಆದರೆ ನಮ್ಮ ನಾಡು ನುಡಿಯನ್ನು ಹೆಚ್ಚು ಪ್ರೀತಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ಉಪಸ್ಥಿತರಿದ್ದರು.
ಗ್ರಂಥಾಲಪಾಲಕರಾದ ಮನೋಹರ್ ಉಪಾಧ್ಯಾಯ ವಂದಿಸಿದರು.
