ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ಇದರ ಸಹಯೋಗದಲ್ಲಿ ಆವಿಷ್ಕಾರ: “ಶಿಕ್ಷಣ ಸಂಸ್ಥೆಗಳ ಭವಿಷ್ಯ ನಿರ್ಧಾರ” ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲ ಹೈಯರ್ ಎಜುಕೇಷನ್ ನ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಸೋಮಶೇಖರ್ ಭಟ್ ಮಾತನಾಡಿ ನಾವು ಸಂಸ್ಥೆಗೆ ಋಣಿಯಾಗಿರಬೇಕು. ಸಂಸ್ಥೆ ನಮ್ಮ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ದಾರಿ ಮೂಲಕ ನಮ್ಮನ್ನು ಬೆಳೆಸುತ್ತದೆ. ಹಾಗೆ ದೊರಕುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಮಣಿಪಾಲ ಹೈಯರ್ ಎಜುಕೇಷನ್ ನಾ ಎರೊನಾಟಿಕಲ್ ಮತ್ತು ಆಟೊಮೊಬೈಲ್ ಎಂಜಿನೀಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ. ಮಹಮ್ಮದ್ ಜುಬೇರ್ ಮಾತನಾಡಿ ಸೃಜನಶೀಲ ಆವಿಷ್ಕಾರ ಗಳ ಮೂಲಕ ದೇಶವನ್ನು ಕಟ್ಟೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ. ನಾರಾಯಣ ಶೆಟ್ಟಿ ವಹಿಸಿದ್ದರು.
ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೌನ್ಸಿಲ್ ನ ಸಂಯೋಜಕರಾದ ಡಾ. ಲಲಿತಾದೇವಿ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಯಜುಷಾ ಸ್ವಾಗತಿಸಿ, ಅಂಜನಾದೇವಿ ಪರಿಚಯಿಸಿ, ಅನಾಜ್ ವಂದಿಸಿದರು.