ಕುಂದಾಪುರ: ಆಗಸ್ಟ್ 29ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಗಣಕಯಂತ್ರ ವಿಭಾಗ ಹಾಗೂ ಇನ್ಸ್ಟಿಟ್ಯೂಷನ್ ಇನ್ನೋವೆಷನ್ ಕೌನ್ಸಿಲ್ ಇವರ ಸಹಯೋಗದೊಂದಿಗೆ ಪ್ರಥಮ ಪದವಿಯ ಬಿಸಿಎ ವಿದ್ಯಾರ್ಥಿಗಳಿಗಾಗಿ “ಬಿ.ಸಿ.ಎ ಕೋರ್ಸ್ ಪರಿಚಯ ಎನ್ನುವ ಮಾಹಿತಿ ಮತ್ತು ಅವಕಾಶಗಳು” ಕಾರ್ಯಾಕ್ರಮವು ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಬಿಸಿಎ ಪದವಿಯ ಉಪಯುಕ್ತತೆ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಸತ್ಯನಾರಾಯಣ ಅವರು ಉಪಸ್ಥಿತರಿದ್ದರು.
ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಗಣೇಶ್ ಕೆ ಅವರು ವಿದ್ಯಾರ್ಥಿಗಳಿಗೆ ಡೇಟಾ ಅನಾಲಿಟಿಕ್ಸ್ , ಅದರ ಪಠ್ಯಕ್ರಮ ಮತ್ತು ವೃತ್ತಿ ಅವಕಾಶಗಳ ಬಗ್ಗೆ ವಿವರಿಸಿದರು. ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿಯಾದ ಪ್ರೊಫೆಸರ್ ವಿಜಯಲಕ್ಷ್ಮಿ ಎನ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮತ್ತು ಮಶಿನ್ ಲರ್ನಿಂಗ್ ಕೋರ್ಸ ಅವಶ್ಯಕತೆ ಹಾಗೂ ವಿವಿಧ ವೃತ್ತಿ ಅವಕಾಶಗಳ ಬಗ್ಗೆ, ಅಂತೆಯೇ ಇನ್ನೊರ್ವ ಉಪನ್ಯಾಸಕರಾದ ಪ್ರೊ. ಕೃಷ್ಣ ಅವರು ಸಾಮಾನ್ಯ ಬಿಸಿಎ ಕೋರ್ಸ್ ನ ಉಪಯುಕ್ತತೆ, ವಿಪುಲ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿಯರಾದ ಶ್ರೀನಿಧಿ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ, ರೂಪ ಕೆ ಸ್ವಾಗತಿಸಿ, ಚಂದ್ರಕಲಾ ಸಕಲಾತಿ ಅವರು ವಂದಿಸಿದರು.