ಕುಂದಾಪುರ: ಮೇ 8ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್, ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಇದರ ಸಹಯೋಗದಲ್ಲಿ ಪರಿಣಾಮಕಾರಿ ಉಪನ್ಯಾಸ ಮಾಲಿಕೆ 2024 ಕಾರ್ಯಕ್ರಮದ ಅಡಿಯಲ್ಲಿ ಎರಡು ಉಪನ್ಯಾಸ ಗೋಷ್ಠಿಗಳು ನಡೆದವು.
ಮೋದಲ ಗೋಷ್ಠಿಯಲ್ಲಿ ರಾಜಾರಾಂ ಫಾಲಿಮರ್ಸ್ ಇದರ ಸುರೇಶ್ ಕಾಮತ್ ಅವರು ” ಉದ್ಯಮಶೀಲತೆಯಲ್ಲಿ ಆವಿಷ್ಕಾರ ಮತ್ತು ಮಹತ್ವ ಮಾತನಾಡಿ ಉದ್ಯಮ ಆರಂಭಿಸಲು ಬರುವಂತಹ ತೊಡಕುಗಳು ಮತ್ತು ಅದನ್ನು ಎದುರಿಸಿ ಉದ್ಯಮ ಕಟ್ಟುವ ನೆಲೆಗಳು ಪ್ರಯತ್ನದ ಕುರಿತು ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ತೆಕ್ಕಟ್ಟೆಯ ಕಾಮಾಕ್ಷಿ ಫಾರ್ಮ್ಸ್ ಇದರ ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ದಿವ್ಯಾ ನಾಯಕ್ ಅವರು “ಕಲ್ಪನೆ ಮತ್ತು ಸ್ಟಾರ್ಟ್ ಅಪ್ ಕುರಿತು ಮಾತನಾಡಿ ಉದ್ಯಮ ಆರಂಭಿಸಿ ಅದರ ಮಾರುಕಟ್ಟೆ ವಿಸ್ತರಣೆಯಲ್ಲಿ ಬರುವಂತಹ ಸವಾಲುಗಳು ಮತ್ತು ಅದರ ಯಶಸ್ವಿ ಸುಲಭ ಉಪಾಯಗಳು ಮಾರುಕಟ್ಟೆ ವಿಸ್ತರಣೆಯ ಸೂಕ್ಷ್ಮ ವಿಚಾರಗಳು ಮಾರ್ಗೊಪಾಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಟ್ ಇನ್ನೋವೇಶನ್ ಕೌನ್ಸಿಲ್ ಇದರ ಅಧ್ಯಕ್ಷರಾದ ಡಾ. ಬಿ ಲಲಿತಾದೇವಿ ಕಾಲೇಜಿನ ಐಕ್ಯೂಎಸಿ ಸಂಯೋಜಕರಾದ ಡಾ.ವಿಜಯಕುಮಾರ್ ಕೆ.ಎಂ ಉಪಸ್ಥಿತರಿದ್ದರು.
ಮೊದಲ ಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಶ್ರೀಕೃಷ್ಣ ಕೆದ್ಲಾಯ ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಪರಿಚಯಿಸಿದರು. ದ್ವಿತೀಯ ಗೋಷ್ಠಿಯಲ್ಲಿ ವಿದ್ಯಾರ್ಥಿನಿ ಧೃತಿ ಕಾರ್ಯಕ್ರಮ ನಿರೂಪಿಸಿ, ಸುಜನಾ ಪರಿಚಯಿಸಿ, ಭೂಮಿ ವಂದಿಸಿದರು.