

ಕುಂದಾಪುರ: ಪ್ರತಿದಿನವು ಇತರರನ್ನು ಗೆಲ್ಲಿಸಿ ಎಂದು ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಟ್ರಸ್ಟ್ ಕುಂದಾಪುರ ಇದರ ಅಧ್ಯಕ್ಷರಾದ ಗುರೂಜಿ ಶಾಂತಾರಾಮ್ ಭಂಡಾರ್ಕರ್ ಅವರು ಹೇಳಿದರು.
ಅವರು ಡಿಸೆಂಬರ್ 5ರಂದು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ ಸಮಾರಂಭ- 2023 ಇದರ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಪ್ರತಿದಿನವು ಮನೆ ಮನಸಿನಲ್ಲಿ ಕನಸಿನಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಇತರರು ಜಯಗಳಿಸಬೇಕು. ನಿಮಗೂ ಬದುಕಿನಲ್ಲಿ ಸಾರ್ಥಕತೆಯ ಅನುಭವವಾಗುತ್ತದೆ. ಆಗ ಜಗತ್ತು ನಿಮ್ಮ ವಶವಾಗುತ್ತದೆ. ಅಲ್ಲದೆ ಪ್ರತಿ ವರ್ಷ ನಮ್ಮ ತಂದೆಯವರಾದ ಎ.ಎಸ್.ಭಂಡಾರ್ಕಾರ್ ಅವರು ಸಂಸ್ಮರಣೆಯ ನಿಮಗೆ ಚಿರುಋಣಿ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಾನಕಿ ಶ್ರೀಕಾಂತ್ ಸಿಂಗಾಪುರ ಇವರು ಮಾತನಾಡಿ ಸಕಾರಾತ್ಮಕ ಪ್ರತಿಕ್ರಿಯೆ ಮತ್ತು ವರ್ಣನೆಗಳಿಂದ ನಮ್ಮ ಸಾಧನೆಯ ಕುರಿತು ಸರಿಯಾದ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆ. ಉದಾತ್ತ ಗುಣ ಮತ್ತು ಆಲೋಚನೆಗಳಿಂದ ನಮ್ಮ ವ್ಯಕ್ತಿತ್ವದ ಸಬಲೀಕರಣ ವಾಗುತ್ತದೆ. ಯಾವತ್ತೂ ನಾವು ತಿಳಿದು ಮತ್ತು ಕಲಿತ ವಿಷಯದ ಕುರಿತು ಸದಾ ಮನನ ಮಾಡಬೇಕು. ಆಗ ಖಂಡಿತ ನಮ್ಮ ಸಾಧನೆಯ ಹಾದಿ ಸುಗಮವಾಗುತ್ತದೆ. ಸರಿಯಾದ ರೀತಿಯಲ್ಲಿ ಯಾವುದೇ ವಿಷಯದ ಕುರಿತು ಕಾರ್ಯಾಶೀಲರಾಗಬಹುದು ಎಂದು ಹೇಳಿದರು.
ತಿಳಿದು ಒಳ್ಳೆಯ ವಿಷಯವನ್ನು ಮನನ ಮಾಡುವ ಅಭ್ಯಾಸ ಇಟ್ಟುಕೊಂಡರೆ ಸರಿಯಾದ ರೀತಿಯಲ್ಲಿ ವಿಷಯದ ಕುರಿತು ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಎಲ್ಲಾ ಸಮಸ್ಯೆಗಳಿಗೆ ಒಂದು ರೀತಿಯ ಪರಿಹಾರ ಸಿಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರತಿವರ್ಷದಂತೆ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನಡೆಸುವ ಅಂತರ್ ಕಾಲೇಜು ಸಂಗೀತ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ವರ್ಷ ಕುಂದಾಪುರದ ಶ್ರೀ ಬಿ.ಬಿ.ಹೆಗ್ಡೆ ಕಾಲೇಜು ಸಮಗ್ರ ಪ್ರಶಸ್ತಿ ಪಡೆದು ಡಾ ಎ.ಎಸ್. ಭಂಡಾರ್ಕರ್ ಪರ್ಯಾಯ ಫಲಕವನ್ನು ಪಡೆಯಿತು. ಅಲ್ಲದೆ ಮಂಂಗಳೂರಿನ ಎಂ.ಆರ್.ಪಿ.ಎಲ್ ಅವರು ನಡೆಸಿದ ಹಿಂದಿ ಭಾಷಣ ಸ್ಪರ್ಧೆ ವಿಜೇತರನ್ನು ಗುರುತಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಕೆ. ಶಾಂತಾರಾಮ್ ಪ್ರಭು, ಕೆ.ದೇವದಾಸ್ ಕಾಮತ್, ಯು.ಎಸ್.ಶೆಣೈ, ಪ್ರಜ್ಞೇಶ್ ಪ್ರಭು, ಗುರೂಜಿ ಶಾಂತಾರಾಮ್ ಆಶ್ರಮದ ಸಂಯೋಜಕರಾದ ಶ್ರೀನಿವಾಸನ್ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ.ಎಂ.ಗೊಂಡ ವಂದಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಅರುಣ್.ಎ.ಎಸ್. ಕಾರ್ಯಕ್ರಮ ನಿರೂಪಿಸಿದರು. ಲಲಿತಕಲಾ ಸಂಘದ ಸಂಯೋಜಕರಾದ ಶಶಾಂಕ್ ಪಟೇಲ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು ಉಪನ್ಯಾಸಕಿ ಪ್ರಿಯಾ ರೇಗೊ ಅತಿಥಿಗಳನ್ನು ಪರಿಚಯಿಸಿದರು.




