JANANUDI.COM NETWORK
ಕುಂದಾಪುರ:ಶಿಕ್ಷಣವೂ ಕೇವಲ ಪದವಿಯನ್ನು ನೀಡುವುದಲ್ಲದೆ ಬದುಕಿನ ಪಾಠವನ್ನ ಮತ್ತು ಬದುಕುದನ್ನು ಕಲಿಸಬೇಕು ಎಂದು ಜೆ. ಸಿ. ಐ ನ ತರಬೇತು ದಾರರಾದ ಬಾಸುಮ ಕೊಡಗು ಅವರು ಹೇಳಿದರು. ಅವರು ಇತ್ತೀಚೆಗೆ ಇಲ್ಲಿನ ಭಂಡಾಕಾರ್ಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕವೂ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ಶಿಕ್ಷಣ ವ್ಯವಸ್ಥೆ ಕೇವಲ ಪರೀಕ್ಷೆ ಮಾಡಿ ಅಂಕಗಳನ್ನುನೀಡುವ, ಪ್ರಮಾಣ ಪತ್ರವನ್ನು ನೀಡುವುದಕ್ಕೆ ಮಾತ್ರ ಮೀಸಲಾಗಿದೆ. ಇದರಿಂದ ವಿದ್ಯಾರ್ಥಿ ಸ್ವಂತಿಕೆಯಿಂದ ಬೆಳೆಯಲು ಸಾಧ್ಯವಿಲ್ಲ. ಶಿಕ್ಷಣವೂ ವಿದ್ಯಾರ್ಥಿಯ ಸರ್ವತೋ ಮುಖ ಬೆಳವಣಿಗೆಗೆ ಸಹಕಾರಿಯಾಗಬೇಕು, ಸ್ವತಂತ್ರವಾಗಿ ಬದುಕುದನ್ನು ಕಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಇಂದಿನವಿ ದ್ಯಾರ್ಥಿಗಳಲ್ಲಿ ಹೆಚ್ಚಿನವರು ತಮ್ಮ ಪಾಲಕರ ಅವಲಂಬನೆಯಲ್ಲಿ ಬದುಕುತಿದ್ದಾರೆ. ಪಾಲಕರ ನಿರ್ಧಾರವೇ ಅವರ ನಿರ್ಧಾರವಾಗಿರುತ್ತದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ಕೇವಲ ಅಂಕ ಮತ್ತು ಪ್ರಮಾಣ ಪತ್ರಗಳಿಗಾಗಿ ಮೀಸಲಾಗಿರದೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಹೀಗಾಗ ಬೇಕಾದರೆ ನಿಮ್ಮೊಳಗೆ ನೀವು ಬದಲಾಗಬೇಕು. ನೀವು ತೆಗೆದು ಕೊಳ್ಳವ ನಿರ್ಧಾರದ ಮೇಲೆ ನಿಮ್ಮ ಬದುಕು ನಿಂತಿದೆ. ನೀವು ಯಾರಿಗೂ ಅವಲಂಬಿತರಾಗದೆ ನಿಮ್ಮ ಜೀವನವನ್ನು ನೀವು ರೂಪಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ. ಸಿ. ಐ. ಕುಂದಾಪುರ ಸಿಟಿ ಇದರ ಅಧ್ಯಕ್ಷರಾದ ಜೆಸಿ ಅಭಿಲಾಶ್ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಹುಸೇನ್ ಹೈ ಕಾಡಿ ಸ್ಥಾಪಕ ಅಧ್ಯಕ್ಷರು ಜೆ. ಸಿ. ಐ.ಕುಂದಾಪುರ ಸಿಟಿ, ಕೆ. ಕಾರ್ತಿಕೇಯ ಮದ್ಯಾಸ್ತ ಪೂರ್ವ ವಲಯಾಧ್ಯಕ್ಷರು, ಸುಹೇಲ್ಮುದು ಗೋಪಾ ಡಿ, ಯುವ ಜೆಸಿ ಅಧ್ಯಕ್ಷರು, ವಿಜಯಭಂಡಾರಿ, ಜೆಸಿ. ಲೋನಾ ಕಾರ್ಯದರ್ಶಿ, ಎನ್. ಎಸ್. ಎಸ್. ಯೋಜನಾಧಿಕಾರಿಯಾದ ರಾಮಚಂದ್ರ ಆಚಾರ್ಯ, ಮತ್ತುಅರುಣ್ಎ. ಎಸ್. ಉಪಸ್ಥಿತರಿದ್ದರು.
ವಿದ್ಯಾರ್ಥಿ ಲಾವಣ್ಯ ಸ್ವಾಗತಿಸಿ, ಪ್ರಜ್ವಲ್ಬಿ. ಕಾಮ್ನಿ ರೂಪಿಸಿ, ವಿದ್ಯಾರ್ಥಿ ವೈಷ್ಣವಿ ವಂದಿಸಿ ಕಾರ್ಯಕ್ರಮ ನಿರ್ವಹಿಸಿದರು.