ಭಂಡಾರ್ಕಾರ್ಸ್:ಕನ್ನಡದ ಸೃಜನಶೀಲ ಕೃತಿಗೆ ಡಾ.ಹೆಚ್. ಶಾಂತಾರಾಮ್ ಹೆಸರಿನಲ್ಲಿ ಕೊಡಮಾಡುವ ಪ್ರಶಸ್ತಿಗೆ ಕೃತಿಗಳ ಆಹ್ವಾನ

JANANUDI.COM NETWORK

ಕುಂದಾಪುರ: ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಇದರ ಆಡಳಿತಾಧಿಕಾರಿಗಳಾದ ಡಾ.ಹೆಚ್. ಶಾಂತಾರಾಮ್ ಅವರ ಹೆಸರಿನಲ್ಲಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ದತ್ತಿನಿಧಿ ಸ್ಥಾಪಿಸಿ, 2010ರಿಂದ ಕನ್ನಡದ ಅತ್ಯುತ್ತಮ ಸೃಜನಶೀಲ ಕೃತಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ.
ಈ ವರ್ಷ 2019, 2020,2021ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಸಣ್ಣ ಕಥಾ ಸಂಕಲನಗಳನ್ನು ಮಾತ್ರ ಆಹ್ವಾನಿಸಲಾಗಿದೆ. ಆಸಕ್ತರು ಇದೇ ಎಪ್ರಿಲ್ ಮೂವತ್ತರ ಒಳಗೆ( 30/4/2022) ಮೇಲಿನ ವರುಷಗಳಲ್ಲಿ ಪ್ರಕಟಗೊಂಡ ಸಣ್ಣಕಥಾ ಸಂಕಲನಗಳ ನಾಲ್ಕು ಪ್ರತಿಗಳನ್ನು ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ವೇದಿಕೆ, ಭಂಡಾರ್ಕಾರ್ಸ್ ಕಾಲೇಜು, ಕುಂದಾಪುರ- 576201, ಉಡುಪಿ ಜಿಲ್ಲೆ ಇಲ್ಲಿಗೆ ಕಳುಹಿಸಿಕೊಡಬಹುದು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಗಸ್ಟ್ 13,2022ರಂದು ನಡೆಯಲಿದ್ದು, ಹದಿನೈದು ಸಾವಿರ ರೂಪಾಯಿ ನಗದಿನೊಂದಿಗೆ ಬೆಳ್ಳಿ ಫಲಕ ನೀಡಲಾಗುವುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9449257263 ಯನ್ನು ಸಂಪರ್ಕಿಸಬಹುದು.