

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಡಾ. ರಾಮಚಂದ್ರ ಶೆಟ್ಟಿಗಾರ್ ಅವರು ಅಕ್ಟೋಬರ್ 10ರಂದು ನಿಧನರಾದರು. ಅಕ್ಟೋಬರ್ 11ರಂದು ಶ್ರದ್ಧಾಂಜಲಿ ಸಭೆ ಕರೆದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಮತ್ತಿತರ ಉಪನ್ಯಾಸಕರು ಪುಷ್ಪನಮನ ಸಲ್ಲಿಸಿ ನಿಧನರಾದ ಅವರಿಗೆ ಚಿರಶಾಂತಿ ಕೋರಿದರು. ಡಾ.ರಾಮಚಂದ್ರ ಶೆಟ್ಟಿಗಾರ್ ಅವರು ಕುರಿತುಇತಿಹಾಸವಿಭಾಗಮುಖ್ಯಸ್ಥಪ್ರೊಗೋಪಾಲ್ಕೆ ಮಾತನಾಡಿದರು.