

ಕುಂದಾಪುರ: ಮೇ 10ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಕಸ್ತೂರಬಾ ಆಸ್ಪತ್ರೆ ಮಣಿಪಾಲ ಲಯನ್ಸ್ ಕ್ರೌನ್ ಕುಂದಾಪುರ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್ ಮತ್ತು ರೇಂಜರ್ಸ್, ರೆಡ್ ರಿಬ್ಬನ್ ಕ್ಲಬ್ , ಎನ್.ಸಿ.ಸಿ ಇವರು ಸಹಯೋಗದೊಂದಿಗೆ
“ಸ್ವಯಂಪ್ರೇರಿತ ಬ್ರಹತ್ ರಕ್ತದಾನ ಶಿಬಿರ” ನಡೆಯಿತು. ಒಟ್ಟು 168 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಸ್ತೂರಬಾ ಆಸ್ಪತ್ರೆ, ಮಣಿಪಾಲ ಇದರ ಸಂಯೋಜಿತ ಆರೋಗ್ಯ ಮತ್ತು ಜೈವಿಕ ವೈದ್ಯಕೀಯ ಕಾರ್ಯಕ್ರಮ ಇಲ್ಲಿನ ದೀಪ್ ಮಡ್ಕಂಕರ್ ಇವರು ಮಾತನಾಡಿ ರಕ್ತದಾನದ ಮಹತ್ವವನ್ನು ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಇದರ ಸಭಾಪತಿ, ಜಯಕರ ಶೆಟ್ಟಿ ಮಾತನಾಡಿ ತಂತ್ರಜ್ಞಾನ ಮುಂದುವರೂ ರಕ್ತ ತಯಾರಿಸಲು ಅಥವಾ ದೇಹದ ಅಂಗಾಂಗಗಳು ತಯಾರಿ ತಂತ್ರಜ್ಞಾನ ಬಂದಿಲ್ಲ. ಒಂದೊಮ್ಮೆ ತೀವ್ರ ರಕ್ತಸ್ರಾವವಾದರೆ ರಕ್ತ ನೀಡುವುದರಿಂದ ಮಾತ್ರ ರಕ್ತಸ್ರಾವ ನಿಲ್ಲಿಸಬಹುದು. ರಕ್ತನಿಧಿಗಳಲ್ಲಿ ರಕ್ತದ ಕೊರತೆ ಇದೆ. ಹಾಗಾಗಿ ರಕ್ತದಾನ ಮಾಡಿ ಜೀವ ಉಳಿಸಿ. ಮಾನವೀಯತೆ ನೆಲೆಯಲ್ಲಿ ರಕ್ತದಾನ ಮಾಡಿ. ಅದು ಮನುಷ್ಯತ್ವದ ಋಣ .ಇಂತಹ ಕಾರ್ಯದಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕುಂದಾಪುರದ ಲಯನ್ಸ್ ಕ್ರೌನ್ ಅಧ್ಯಕ್ಷ ದಿನಕರ ಶೆಟ್ಟಿ, ಕಿರಣ್ ಆಚಾರ್ಯ ಸದಸ್ಯರು ಲಯನ್ಸ್ ಕ್ರೌನ್ ಕುಂದಾಪುರ, ಮುತ್ತಯ್ಯ ಶೆಟ್ಟಿ, ಸತ್ಯನಾರಾಯಣ ಪುರಾಣಿಕ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ, ಎನ್.ಸಿ.ಸಿ.ಅಧಿಕಾರಿ ಶರಣ್ ಎಸ್ ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಎನ್ಎಸ್ಎಸ್ ಅಧಿಕಾರಿ ರಾಮಚಂದ್ರ ಆಚಾರ್ಯ ಸ್ವಾಗತಿಸಿದರು. ಯುಥ್ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜನಾಧಿಕಾರಿ ವಿದ್ಯಾರಾಣಿ ವಂದಿಸಿದರು. ವಿದ್ಯಾರ್ಥಿನಿ ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು.
