ಕುಂದಾಪುರ: ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜು ಕುಂದಾಪುರ ಇದರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭವು ಫೆಬ್ರವರಿ 15ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಲ್ತೊಡು ಇಲ್ಲಿ ನೆರವೇರಿತು.
ಎನ್.ಎಸ್ ಗ್ರೂಪ್ ಮತ್ತು ಯುವ ಮನೀಷ್ ಇದರ ಮಾಲಕರಾದ ಜಯಶೀಲ ಶೆಟ್ಟಿ, ಶಿಬಿರವನ್ನು ಉದ್ಘಾಟಿಸಿ ಶಿಬಿರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಶಿಬಿರಕ್ಕೆ ಶುಭಹಾರೈಸಿದರು.
ತದನಂತರ ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಗೋಪಾಲ ಪೂಜಾರಿಯವರು ಕಾಲ್ತೊಡು ಗ್ರಾಮಪಂಚಾಯತ್ ವತಿಯಿಂದ ಶಾಲೆಗೆ ನೀಡಿದ ಕುಡಿಯುವ ನೀರಿನ ಫಿಲ್ಟರ್ ನ್ನು ಉದ್ಘಾಟಿಸಿದರು. ಕಾಲ್ತೊಡು ಶಾಲೆಯ ವಿದ್ಯಾರ್ಥಿಗಳಿಗೆ ವಾಹನದ ಸೌಲಭ್ಯಕ್ಕಾಗಿ ಜಯಶೀಲ ಶೆಟ್ಟಿ ಅವರಿಗೆ ಮುಖ್ಯ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಮಂಡಳಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮನವಿಯನ್ನು ಸಲ್ಲಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಇವರು ಏನ್ ಎಸ್ ಎಸ್ ಶಿಬಿರದ ಧ್ಯೇಯೋದ್ದೇಶಗಳನ್ನು ತಿಳಿಸಿ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳುವoತೆ ಹೇಳಿದರು
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ಎಂ. ಗೊಂಡ, ಸದಾಶಿವ ಶೆಟ್ಟಿ ಆಡಳಿತ ಮೊಕ್ತೆಸರರು, ಶ್ರೀ ಬ್ರಹ್ಮಲಿಂಗೇ ಶ್ವರ ದೇವಸ್ಥಾನ, ಮಾರಣಕಟ್ಟೆ, ಧರ್ಮರಾಜ್ ಜೈನ್, ಧರ್ಮದರ್ಶಿಗಳು,ಪದ್ಮಾವತಿ ದೇವಸ್ಥಾನ, ಬೊಳ್ಳoಬಳ್ಳಿ, ಎಚ್ ವಿಜಯಕುಮಾರ ಶೆಟ್ಟಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರು, ಬಿ. ಎಸ್. ಸುರೇಶ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರು, ಸುಮಖ ಸರ್ಜಿಕಲ್ಸ್, ಉಪ್ಪುಂದ, ವಾಜೂರಾಜ್ ಶೆಟ್ಟಿ, ವೈಶಾಲಿ ಬಾರ್ & ರೆಸ್ಟೋರೆಂಟ್, ಉಪ್ಪುಂದ, ವಿಜೇಂದ್ರ ಆಚಾರ್ಯ, ಅಧ್ಯಕ್ಷರು, ಶಾಲಾಭಿವೃದ್ಧಿ ಮಂಡಳಿ, ವಿನಾಯಕ್ ಮೇರ್ಟ ಮುಖ್ಯ ಶಿಕ್ಷಕರು ಹಾಗೂ ಏನ್ ಎಸ್ ಎಸ್ ಯೋಜನಾಧಿಕಾರಿಗಳಾದ ಅರುಣ್ ಎ. ಎಸ್.ಸಮಾರಂಭದಲ್ಲಿ ಉಪಸ್ಥಿತರಿದ್ದರು. ಕಾಲ್ತೊಡು ಗ್ರಾಮಪಂಚಾಯತ್ ನ ಅಧ್ಯಕ್ಷರಾದ ಅಣ್ಣಪ್ಪ ಶೆಟ್ಟಿ ಬಟ್ನಾಡಿ ಇವರು ಸ್ವಾಗತಿಸಿದರು. ಯೋಜಾನಾಧಿಕಾರಿಗಳಾದ ರಾಮಚಂದ್ರ ಆಚಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಶಿಬಿರಾರ್ಥಿಗಳಾದ ಕುಮಾರಿ ರಶೀಕಾ ವಂದಿಸಿದರು ಕುಮಾರಿ ಸುನಿಧಿ ಕಾರ್ಯಕ್ರಮ ನಿರ್ವಹಿಸಿದರು.