JANANUDI.COM NETWORK
ಕುಂದಾಪುರ: ಇತ್ತೀಚೆಗೆಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ, ಕುಂದಾಪುರ ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನ, ಅಂಬಲಪಾಡಿ, ಉಡುಪಿಮತ್ತುಶ್ರೀ ಕುಂದೇಶ್ವರ ದೇವಸ್ಥಾನಇವರ ಸಹಯೋಗದಲ್ಲಿ ಆನ್‍ಲೈನ್ ಮೂಲಕ “ಜೀವನ ಮೌಲ್ಯ ಶಿಕ್ಷಣ ಶಿಬಿರ” ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ವಾಂಸರಾದ ವಿದ್ವಾನ್‍ಕೃಷ್ಣರಾಜ ಕುತ್ಪಾಡಿ. ಅವರು ಮೌಲ್ಯಮತುಸೌಂದರ್ಯ” ಎಂಬ ವಿಷಯದಕುರಿತು ಮಾತನಾಡಿ, ಸೌಂದರ್ಯಎನ್ನುವುದು ನಮ್ಮಲ್ಲಿಇರುತ್ತದೆ. ನಿಜವಾದ ಸೌಂದರ್ಯವಿರುವುದು ನಮ್ಮ ಒಳ್ಳೆ ಯ ಮೌಲ್ಯಗಳಿಂದಲೇ ಹೊರತು ಬೇರೆನಿಲ್ಲ. ಒಳ್ಳೆಯ ಮೌಲ್ಯಗಳಿದ್ದರೆ ತನ್ನಂತಾನೆ ಬಾಹ್ಯ ಸೌಂದರ್ಯಕ್ಕೆ ಬೆಲೆ ಹೆಚ್ಚುತ್ತದೆ. ಪ್ರಪಂಚದಲ್ಲಿ ಹೆಚ್ಚಿನವರು ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಆದರೆ ಕೇವಲ ಬಾಹ್ಯ ಸೌಂದರ್ಯದಿಂದ ವ್ಯಕ್ತಿತ್ವವನ್ನು ಅಳೆಯಲಾಗದು. ಮೌಲ್ಯಯುತ ವ್ಯಕ್ತಿತ್ವವಿದ್ದಾಗ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಮಹತ್ವ ಬರುವುದು. ಹಾಗಾಗಿ ಬಾಹ್ಯ ಸೌಂದರ್ಯಕ್ಕಿಂತಆಂತರಿಕವಾದ ಮೌಲ್ಯಯುತ ಸೌಂದರ್ಯಕ್ಕೆ ಹೆಚ್ಚು ಅರ್ಥ ಮತ್ತು ಸ್ಥಾನಮಾನವಿದೆಎಂದು ತಿಳಿಸಿದರಲ್ಲದೇ ಕೆಲವು ದೃಷ್ಠಾಂತಗಳ ಮೂಲಕ ಸೌಂದರ್ಯ ಮತ್ತು ಮೌಲ್ಯಗಳು ಬದುಕಿನಲ್ಲಿ ಎಷ್ಟು ಮುಖ್ಯಎಂಬುದನ್ನು ತಿಳಿಸಿದರು.
ಕಾರ್ಯಕ್ರಮದಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ವಹಿಸಿದ್ದರು.
ಕಾಲೇಜಿನ ಐಟಿ ತಂಡದ ಅಮತ್ ಸಿಕ್ವೆರಾ, ಶಂಕರನಾರಾಯಣ ಉಪಾಧ್ಯಾಯ, ವಿಕ್ರಮ್‍ಅವರು ತಾಂತ್ರಿಕವಾಗಿ ಸಹಕರಿಸಿದರು.
ಕಾರ್ಯಕ್ರಮ ಸಂಯೋಜಕಿ ಡಾ.ಯಶವಂತಿ ಕೆ ಉಪಸ್ಥಿತರಿದ್ದರು.
ತೃತೀಯ ಬಿ.ಎಸ್.ಸಿ ವಿದ್ಯಾರ್ಥಿನಿ ಅರುಂಧತಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ಮತ್ತು ಶಾಂತಿಗೀತೆ ನಡೆಯಿತು.