ಕುಂದಾಪುರದ ಭಂಡಾರಕಾರ್ಸ್ ಕಾಲೇಜೊಂದರ ಉಪನ್ಯಾಸಕಿ ಹಲವು ವಿದ್ಯಾರ್ಥಿಗಳಿಗೆ ಅವಾಚ್ಯವಾಗಿ ನಿಂದಿಸಿ, ಬೈದು ಅವಮಾನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ NSUI (National students union of India) ಘಟಕ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿಯಾಗಿ ಘಟನೆಯನ್ನು ಖಂಡಿಸಿದ್ದಲ್ಲದೆ, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಮೇಲೆ ಉಪನ್ಯಾಸಕರುಗಳ ಅನಾವಶ್ಯಕ ದರ್ಪ, ದೌರ್ಜನ್ಯಗಳ ವಿರುದ್ಧ ಬ್ರಹತ್ ಪ್ರತಿಭಟನೆ ಸಂಘಟಿಸಬೇಕಾದೀತು. ಅದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ಪ್ರಾಂಶುಪಾಲರಲ್ಲಿ ಮನವಿ ಮಾಡಲಾಯಿತು. NSUI ಮುಖಂಡರುಗಳ ಖಂಡನೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಪ್ರಾಂಶುಪಾಲರು ಇನ್ನು ಮುಂದೆ ಇಂತಹ ಘಟನೆಗಳು ತಮ್ಮ ಕಾಲೇಜಿನಲ್ಲಿ ಮರುಕಳಿಸದಂತೆ ಮುತುವರ್ಜಿ ವಹಿಸುವುದಾಗಿ ಭರವಸೆ ನೀಡಿದರು. ಸಂತ್ರಸ್ತ ವಿದ್ಯಾರ್ಥಿಯ ಪರವಾಗಿ ಕುಂದಾಪುರ NSUI ದನಿ ಎತ್ತಿದ್ದು ಕಾಲೇಜು ವಿದ್ಯಾರ್ಥಿ ವಲಯಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಅಭಿನಂದನೆಗಳು ಕುಂದಾಪುರ NSUI .
ಈ ಸಂದರ್ಭದಲ್ಲಿ NSUI ಘಟಕದ ಜಿಲ್ಲಾಧ್ಯಕ್ಷರಾದ ಸೌರಬ್ ಬಳ್ಳಾಲ್ , ಕುಂದಾಪುರ NSUI ಘಟಕದ ಅಧ್ಯಕ್ಷ ಯುವ ನಾಯಕ ಸುಜನ್ ಶೆಟ್ಟಿ ಕುಂದಾಪುರ , ಶರತ್ ಕುಂದರ್ , ಸ್ವಸ್ತಿಕ್ ಶೆಟ್ಟಿ, ಪ್ರವೀಣ್ ಪೂಜಾರಿ , ಸ್ವರೂಪ್ ಭಟ್ , ಧನುಷ್ ಶೆಟ್ಟಿ ಸಲ್ವಾಡಿ , ಸಂಜಯ್, ಚಂದ್ರಕಾಂತ್ , ಸುಕೇಶ್ ರವರು ಉಪಸ್ಥಿತರಿದ್ದರು.