ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಶ್ರೀನಿವಾಸಪುರ ಜೀವನ ವಿಧಾನವಾದ ಸಾಂಸ್ಕøತಿಕ ನಾಗರೀಕತೆ ಬೆಳೆದ ಈ ಕಾಲದಲ್ಲಿ ಮಾನಸಿಗೆ ಉಲ್ಲಾಸ ಮುದ ನೀಡುವ ಭಜನೆ ಜಾನಪದ ಸಂಗೀತ ಸಂಸ್ಕøತಿ ಎಲ್ಲರ ಮನಸುಗಳಲ್ಲಿ ಬಿತ್ತರಿಸಿ ಪರಂಪರೆ ಬೆಳೆಸಬೇಕೆಂದು ಶಿಕ್ಷಣ ಸಂಪನ್ಮೂಲ ವ್ಯಕ್ತಿ ನಾಗೇಂಧ್ರ ಪ್ರಕಾಶ್ ಹೇಳಿದರು.
ಪಟ್ಟಣದ ಯೋಗಮಂದಿರದಲ್ಲಿ ಮಹಾ ಶೀವರಾತ್ರಿ ಅಂಗವಾಗಿ ಶ್ರೀಪÀತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಏರ್ಪಡಿಸಿದ್ದ ಭಜನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾಗರೀಕತೆ ಬೆಳೆದಷ್ಟು ಜನಸಾಮಾನ್ಯರಲ್ಲಿ ಸ್ವಾಭಾವಿಕ ಪ್ರಕೃತಿ ಪರಂಪರೆಯ ಮನಸಿಗೆ ಮುದ ನೀಡುವ ಭಜನೆ ನಾಟಕ ಸಂಗೀತ ಕಲೆ ಜನರ ಮನಸುಗಳಲ್ಲಿ ಚಿಗುರೊಡೆಯಬೇಕು. ಕೇಳಿಕೆ ಕೋಲಾಟ ನಾಟಕಗಳು ನೆಪತ್ಯಕ್ಕೆ ಸರಿದು ಜನರಲ್ಲಿನ ಬಂದುತ್ವ ಪ್ರೀತಿ ವಾತ್ಸಲ್ಯ ಸ್ನೇಹ ಭ್ರಾತೃತ್ವ ಮಾಯವಾಗುತ್ತಿದೆ. ಭಜನೆ ಸೇರಿದಂತೆ ಜಾನುಪದ ಕಲೆ ಜನರಿಗೆ ಅರಿವಿಲ್ಲದೆ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದಾರೆ. ರಾಜಕೀಯ ತಂತ್ರಜ್ಞಾನ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕ ನಾಗರೀಕತೆ ಬೆಳೆದಷ್ಟು ಈಗಿನ ಪೀಳಿಗೆ ಪರಂಪರೆಯಿಂದ ನೆಪತ್ಯಕ್ಕೆ ಸರಿಯುತ್ತಿದುವುದು ಸಮಾಜದ ದುದೈವÀ ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರಗಳು ನಮೂರ ಕಲೆ ಮತ್ತು ಕಲಾವಿದರನ್ನು ಉಳಿಸಲು ಹೆಚ್ಚಿನ ಆದ್ಯತೆ ನೀಡಿ ಪ್ರತಿ ಗ್ರಾಮದಲ್ಲಿ ಸರಕಾರದಿಂದ ವರ್ಷಕ್ಕೆ ವಿವಿದ ಒಂದೆರಡು ನಾಟಕ ಜಾನಪದ ಸಂಗೀತ ಗಾಯನ ಭಜನೆ ನಾಗರೀಕರ ಹೃದಯಗಳಲ್ಲಿ ಬಿತ್ತರಿಸುವಂತಹ ಕೆಲಸ ಕಲಾವಿದರ ಮೂಲಕ ಮಾಡಬೇಕೆಂದು ಒತ್ತಾಯಿಸಿದರು. ವಸಂತಲಕ್ಷ್ಮಿ, ಲಕ್ಷ್ಮಿ, ಎಸ್.ರವಿಕುಮಾರ್, ಅನುರಾಧಾ ಇತರರು ಹಾಜರಿದ್ದರು.
13ಶ್ರೀನಿವಾಸಪುರ1: ಯೋಗ ಮಂದಿರದಲ್ಲಿ ಏರ್ಪಡಿಸಿದ್ದ ಭಜನೆ ಕಾರ್ಯಕ್ರಮದಲ್ಲಿ ಬಾಗವಹಿಸಿರುವ ಕಲಾವಿದರು.