ಕುಂದಾಪುರ : ಭಗವದ್ಗೀತೆ ಜೀವನ ಮಾರ್ಗದರ್ಶಕ. ಜೀವನದ ಎಲ್ಲಾ ಮೌಲ್ಯಗಳ ವಿಚಾರಗಳಲ್ಲೂ ಭಗವದ್ಗೀತೆಯಲ್ಲಿ ವರ್ಣನೆ ಇದೆ. ದೇವರ ಮೇಲೆ ನಂಬಿಕೆ, ಜೀವನದ ಉದ್ದೇಶ ಈಡೇರಿಸುತ್ತದೆ. ಅತಿಯಾದ ಆಸೆ, ವ್ಯಾಮೋಹ, ಸಂಪತ್ತಿನ ಅಹಂಕಾರ ಯಾವುದೂ ಸತ್ಯವಲ್ಲ. ಎಲ್ಲಾ ಧರ್ಮಗಳೂ ದೇವರ ಮೇಲಿನ ನಂಬಿಕೆ, ಶ್ರದ್ಧೆಯಿಂದ ಸಿಗುವ ಆನಂದವನ್ನು ವಿವರಿಸುತ್ತವೆ. ಆದರೆ ನಾವು ಅದನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಸೋಲುತ್ತೇವೆ. ಅಪಾರ್ಥದಿಂದ ಸಮಸ್ಯೆಗಳಾಗುತ್ತವೆ. ಭಗವದ್ಗೀತೆಯನ್ನು ಎಲ್ಲರೂ ಓದಿ ಅರ್ಥಪೂರ್ಣ ಜೀವನ ನಡೆಸಬೇಕು ಎಂದು ಶ್ರೀ ಕೃಷ್ಣಚಂದ್ರದಾಸ್ ಹೇಳಿದರು.
ಭಗವದ್ಗೀತೆಯ ಏಳು ನೂರು ಶ್ಲೋಕಗಳನ್ನು 73 ನಿಮಿಷಗಳಲ್ಲಿ ಪಠಣ ಮಾಡಿ ವಿಶ್ವ ದಾಖಲೆಗೈದ ಇವರು “ರೋಟರಿ ಕುಂದಾಪುರ ದಕ್ಷಿಣ”ದವರು ಏರ್ಪಡಿಸಿದ ಭಗವದ್ಗೀತೆ ಮತ್ತು ಜೀವನ ಮೌಲ್ಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಗುರಿ ಇಲ್ಲದ ಮನಸ್ಸಿಗೆ ಭಗವದ್ಗೀತೆ ದಾರಿ ತೋರಿಸುತ್ತದೆ. ಕಾಮ, ಕ್ರೋಧ, ದುರಾಸೆ ಬಿಡು. ನೀನು ಒಳ್ಳೆಯತನ ತೋರಿದರೆ, ನಿನಗೂ ಒಳ್ಳೆಯದೇ ಆಗುತ್ತದೆ, ಆತ್ಮ ಯಾವಾಗಲೂ ಅಮರ ಎನ್ನುತ್ತದೆ ಭಗವದ್ಗೀತೆ ಎಂದರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಮಾನಂದ ಕಾರಂತ ಅತಿಥಿಗಳನ್ನು ಪರಿಚಯಿಸಿದರು.
ಕೆ. ಶಾಂತಾರಾಮ ಪ್ರಭು, ಸತ್ಯನಾರಾಯಣ ಪುರಾಣಿಕ, ಮಹೇಂದ್ರ ಶೆಟ್ಟಿ ವಿಚಾರ ವಿನಿಮಯದಲ್ಲಿ ಪಾಲ್ಗೊಂಡರು.
ಶ್ರೀಮತಿ ಸುರೇಖಾ ಪುರಾಣಿಕ ವಂದಿಸಿದರು.