ಶ್ರೀನಿವಾಸಪುರ: ಪಟ್ಟಣದ ಹೊರವಲಯದ ರೋಣೂರು ಕ್ರಾಸ್ ಬಳಿ ಇರುವ ವಿಷನ್ ಇಂಡಿಯಾ ಪಬ್ಲಿಕ್ ಪದವಿ ಪೂರ್ವ ಕಾಲೇಜಿನ ಕಛೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ವಿಷನ್ ಇಂಡಿಯಾ ಪಬ್ಲಿಕ್ ಕಾಲೇಜಿನ ಕಾರ್ಯದರ್ಶಿ ಡಾ|| ಎಂ.ಎಸ್.ಕವಿತಾ ಮಾತನಾಡಿ ನಮ್ಮ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ೧೦೦% ಹಾಗೂ ವಾಣಿಜ್ಯ ವಿಭಾಗದಲ್ಲಿ ೯೮% ಫಲಿತಾಂಶ ಪಡೆದಿರುತ್ತದೆ ಎಂದು ಮಾಹಿತಿ ನೀಡಿದರು.
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಭೂಮಿಕ ಕೆ ಎನ್ ೫೮೧ (೯೬.೮೩%) ಪ್ರಥಮ ಹಾಗೂ ಅನುಶ್ರೀ ಎನ್ ೫೭೯ (೯೬.೫%) ಮತ್ತು ಕಾವ್ಯಶ್ರೀ ಎಸ್ ೫೭೯ (೯೬.೫%) ದ್ವಿತೀಯ ಹಾಗೂ ಪುಷ್ಪ ಎಸ್ ಎಸ್ ೫೭೮ (೯೬.೩%) ತೃತೀಯ. ವಾಣಿಜ್ಯ ವಿಭಾಗದಲ್ಲಿ ಅರ್ಜುಮನ್ ಸುಲ್ತಾನಾ ಅನ್ಸಾರಿಯ ೫೭೭(೯೬.೧೬% ) ಪ್ರಥಮ, ಗಣೇಶ್ ಟಿ ಆರ್ ೫೭೨(೯೫.೩೩%)ದ್ವಿತೀಯ, ಜೈನಬ್ ತಾಜ್ ೫೭೧ (೯೫.೧೭%) ತೃತೀಯ ಸ್ಥಾನಗಳನ್ನು ಪಡೆದಿರುತ್ತಾರೆ ಎಂದರು.
ನಮ್ಮ ಶಾಲೆಯಲ್ಲಿ ಎಲ್ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೂ ಇದೆ. ಗ್ರಾಮೀಣ ಭಾಗದ ವಿದ್ಯಾಥಙರ್Âಗಳಿಗೆ ಅನುಕೂಲವಾಗುವಂತೆ ಮುಂದಿನ ದಿನ ಪದವಿ ತರಗತಿಗಳನ್ನು ತರೆಯಲಾಗುವುದು ಎಂದರು. ದ್ವಿತೀಯ ಪಿಯುಸಿಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶ ಹೆಚ್ಚು ಬಂದಿದ್ದು, ವಿಧ್ಯಾಥಿಗಳಿಗೆ ಹಾಗೂ ಉಪನ್ಯಾಸಕರಿಗೆ, ಪೋಷಕರಿಗೆ ಅಭಿನಂದನೆ ಸಲ್ಲಿಸಿದರು.
ಪ್ರಾಂಶುಪಾಲರಾದ ರಾಜಕುಮಾರ್ ಮಾತನಾಡಿ ವಿಜ್ಞಾನ ವಿಭಾಗದಲ್ಲಿ ೭೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೩೫ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ೩೯ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ ಮೂರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಫಲಿತಾಂಶವನ್ನು ಪಡೆದಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ ೪೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೧೭ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, ೨೧ ವಿದ್ಯಾರ್ಥಿಗಳು ಉನ್ನತ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಫಲಿತಾಂಶವನ್ನು ಪಡೆದಿರುತ್ತಾರೆ ಎಂದು ತಿಳಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ನಮ್ಮ ವಿಷನ್ ಇಂಡಿಯಾ ಪದವಿ ಪೂರ್ವ ಕಾಲೇಜು ಅತ್ಯುತ್ತಮ ಫಲಿತಾಂಶವನ್ನು ಪಡೆದಿರುವುದರಿಂದ ಸಂಸ್ಥೆಯ ಅಧ್ಯಕ್ಷರಾದ, ಡಾ| ಕೆ ಎನ್ ವೇಣುಗೋಪಾಲ್ ರವರು ಹಾಗೂ ಕಾರ್ಯದರ್ಶಿಗಳಾದ, ಡಾ|| ಕವಿತಾ ಎಂ ಎಸ್ ಅವರು ಸಂತಸವನ್ನು ವ್ಯಕ್ತಪಡಿಸಿ ವಿದ್ಯಾ