ಮುಸ್ಲಿಂ ಸಮುದಾಯದ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗವನ್ನು ಅರ್ಧದಲ್ಲಿ ಮುಟ್ಟುಗೊಳಿಸಿ ವ್ಯಾಪಾರ ಮತ್ತು ಆಟೋಮೊಬೈಲ್ಸ್ ಗಳಿಗೆ ಮಾರುಹೋಗುತ್ತಿದ್ದಾರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ರವರು ಕರೆ ನೀಡಿದ್ದಾರೆ
ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮಾಜ ಸೇವಕ ಹಾಗೂ ಅಲ್ಪಸಂಖ್ಯಾತರ ಯುವ ಘಟಕದ ಅಧ್ಯಕ್ಷ ಸಾಧಿಕ್ ಅಹಮದ್ ರವರು ಮಕ್ಕಳಿಗಾಗಿ ಉಚಿತ ಪಠ್ಯ ಪರಿಕರಗಳು ಮತ್ತು ಗುರುತಿನ ಚೀಟಿಗಳನ್ನು ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ವಿತರಣೆ ಮಾಡುತ್ತ ಮಾತನಾಡಿದ ಬಿಇಒ ಉಮಾದೇವಿ ರವರು ಈ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು ಮಳೆ ಮಳೆ ಸುರಿಯುವ ವೇಳೆ ಹಾನಿಗೊಳಗಾದಕೊಠಡಿಗಳ ಸಮಸ್ಯೆಯನ್ನು ಶಾಸಕ ರವರ ಗಮನಕ್ಕೆ ತಂದಿದ್ದೇನೆ ಅವರು ಶಾಸಕರ ಅನುದಾನದಲ್ಲಿ ಎರಡು ಕೋಟಿ ಗಣಿಗಳನ್ನು ಮಂಜೂರು ಮಾಡಿದ್ದಾರೆ ಶೀಘ್ರದಲ್ಲಿಯೇ ಈ ಕಾಮಗಾರಿಗಳು ಪ್ರಾರಂಭಗೊಳ್ಳುತ್ತವೆ ಮತ್ತು ಲೈಬ್ರರಿ ಆಟದ ಮೈದಾನ ಮುಂದಿನ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುತ್ತದೆ
ಇಲಾಖೆ ವತಿಯಿಂದ ಎಲ್ಲ ರೀತಿಯ ಸೌಲಭ್ಯಗಳು ಮಕ್ಕಳಿಗಾಗಿ ನೀಡಲಾಗುತ್ತಿದೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಪೋಷಕರಿಗೆ ಕಿವಿಮಾತು ಹೇಳಿದರು
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ವಿದ್ಯಾಭ್ಯಾಸವನ್ನು ಈ ಶಾಲೆಯಲ್ಲಿ ಪಡೆಯುತ್ತಿದ್ದಾರೆ ಹೆಣ್ಣುಮಕ್ಕಳು ಇನ್ನು ಅತ್ಯುನ್ನತ ಶಿಕ್ಷಣವನ್ನು ಪಡೆಯಬೇಕೆಂದು ಕಿವಿಮಾತು ಹೇಳಿದರು
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರವು ಮಕ್ಕಳ ಪೋಷ್ಟಿಕತೆಯನ್ನು ಸಹ ಗಮನದಲ್ಲಿಟ್ಟುಕೊಂಡು ಋಣಾತ್ಮಕ ಶಿಕ್ಷಣವನ್ನು ನೀಡಲು ಮತ್ತು ಮಕ್ಕಳ ಆರೋಗ್ಯ ಹಿತ ದೃಷ್ಟಿಯಿಂದ ಪೌಷ್ಟಿಕ ಆಹಾರವನ್ನು ಸಹ ನೀಡಲಾಗುತ್ತಿದೆ ಈ ಎಲ್ಲಾ ಸದುಪಯೋಗಗಳನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು
ಮುಸ್ಲಿಂ ಸಮುದಾಯದ ಮಕ್ಕಳು ಆಟೋಮೊಬೈಲ್ಸ್ ಮತ್ತು ವ್ಯಾಪಾರವನ್ನು ಮುಂದುವರಿಸಲು ಶಾಲಾ ವ್ಯಾಸಂಗವನ್ನು ಅರ್ಧದಲ್ಲಿ ಮುಟುಕುಗೊಳಿಸಿ ವ್ಯಾಪಾರದ ಜೊತೆ ಗಮನ ಹರಿಸುತ್ತಿದ್ದಾರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ ಪೋಷಕರು ಗಮನದಲ್ಲಿಟ್ಟುಕೊಂಡು ಇಂತಹ ಮಕ್ಕಳಿಗೆ ಸರ್ಕಾರದಿಂದ 14 ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ಕಡ್ಡಾಯ ಶಿಕ್ಷಣವನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಇಂತಹ ಮಕ್ಕಳು ಶಾಲೆಗೆ ಹಾಜರಾಗುವಂತೆ ಪೋಷಕರು ಗಮನ ಹರಿಸಬೇಕಾಗಿದೆ ಎಂದು ಕರೆ ನೀಡಿದರು
ಬಿ ಆರ್ ಸಿ ಸಂಯೋಜಕರಾದ ವಸಂತ ರವರು ಮಾತನಾಡಿ ಕಳೆದ ಸಾಲಿನಲ್ಲಿ ಈ ಶಾಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಇದ್ದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ನೀಡಿದ್ದಾರೆ ಆಂಗ್ಲ ಮಾಧ್ಯಮವನ್ನು ಹೊಸದಾಗಿ ನೀಡಿದ್ದು ಈ ನಟಿ ನಲ್ಲಿ ಪೋಷಕರು ಈ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಸೇರ್ಪಡೆ ಮಾಡಿದ್ದಾರೆ ಶಿಕ್ಷಕರ ಜವಾಬ್ದಾರಿಯು ಮತ್ತು ಉತ್ತಮ ಬೆಳವಣಿಗೆಯು ನೋಡಿ ಪ್ರಶಂಶಿಸಿದರು ಪೋಷಕರು ಇಲ್ಲಿನ ಶಾಲಾ ಶಿಕ್ಷಕರ ಮೇಲೆ ಅಭಿಮಾನ ನಂಬಿಕೆ ಇಟ್ಟಿದ್ದು ಒಳ್ಳೆಯ ಬೆಳವಣಿಗೆ ಕಲಿಕಾ ಕ್ಷೇತ್ರಕ್ಕೆ ಶಿಕ್ಷಕರು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಹೆಣ್ಣುಮಕ್ಕಳು ಹೆಚ್ಚು ವ್ಯಾಸಂಗವನ್ನು ಮಾಡಬೇಕಾಗಿದೆ ಎಂದು ಸಲಹೆ ನೀಡಿದರು
ಶಾಲಾ ಮಕ್ಕಳಿಗೆ ಓದಲು ಶಿಕ್ಷಕರು ಶಾಲೆಯಲ್ಲಿ ಮಾತ್ರ ಹೇಳುತ್ತಾರೆ ಅನಂತರ ಮಕ್ಕಳಿಗೆ ಪೋಷಕರು ಹೆಚ್ಚಿನ ಜವಾಬ್ದಾರಿಯನ್ನು ಹೊತ್ತು ಮನೆಯಲ್ಲಿ ವ್ಯಾಸಂಗ ಮಾಡಲು ಶ್ರಮ ಕೊಡಬೇಕು ಎಂದು ಸಲಹೆಯನ್ನು ಈ ಸಮಯದಲ್ಲಿ ನೀಡಿದರು
ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಸುಲೋಚನಾ ರವರು ಮಾತನಾಡಿ ಸಮಾಜ ಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಾಧಿಕ್ ಅಹಮದ್ ರವರು ಒಳ್ಳೆಯ ಪರಿಪಾಠವನ್ನು ಹೊಂದಿದ್ದಾರೆ ಇವರಿಗೆ ಇಲಾಖೆಯ ಪರವಾಗಿ ಧನ್ಯವಾದಗಳು ಎಲ್ಲರಿಗೂ ದಾನ ಮಾಡುವಂತಹ ಮನಸ್ಸು ಬರುವುದಿಲ್ಲ ಸಂಪಾದನೆ ಮಾಡುತ್ತಾರೆ ಆದರೆ ಕೇವಲ ದಾನದ ಗುಣವನ್ನು ನೀಡುತ್ತಾರೆ. ಅಕ್ಷರ ದಾಸೋಹ ಘಟಕದಲ್ಲಿ ಕೈ ತೊಳೆಯುವ ಘಟಕವನ್ನು ಸ್ಥಾಪಿಸಬೇಕೆಂದು ಧಾನ್ಯಗಳಲ್ಲಿ ಇಲ್ಲಿನ ಶಾಲಾ ಶಿಕ್ಷಕರು ಪರಿಶ್ರಮ ಪಡಬೇಕಿದೆ ಎಂದು ಕಿವಿಮಾತು ಹೇಳಿದರು
ನಾಯಂಡಲ್ಲಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿದ್ದಾಗ ನನಗೆ ಕೆಲವು ಅನುಭವಗಳು ಆಗಿವೆ ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಲ್ಲಿ ಡ್ರಾಪುಟ್ ಆಗುತ್ತಿದ್ದರು ಅಂತಹ ಮಕ್ಕಳನ್ನು ಪೋಷಕರ ಒಟ್ಟಿಗೆ ಮಾತನಾಡಿ ಪೋಷಕರು ಶಾಲೆಗೆ ಸೇರಿಸಲು ನಾನು ಸಹ ಶ್ರಮ ಪಟ್ಟಿದ್ದೇನೆ ಎಂದು ತನ್ನ ಅನುಭವವನ್ನು ವ್ಯಕ್ತಪಡಿಸಿದ್ದರು
ಶಾಲೆಗೆ ಬರುವುದು ಹೋದಲು ಮಾತ್ರ ಆದರೆ ಮನೆಗೆ ಹೋದಾಗ ಟಿವಿ ಮೊಬೈಲ್ ಗಳನ್ನು ನೋಡುವ ಪರಿಪಾಠವನ್ನು ಮಕ್ಕಳು ತ್ಯಜಿಸಬೇಕಾಗಿದೆ ಟಿವಿ ನೋಡುವುದಾದರೆ ಪ್ರಚಲಿತ ವಿದ್ಯಮಾನಗಳು ಕುರಿತು ಕಲಿಯಿರಿ ನ್ಯೂಸ್ ವೀಕ್ಷಣೆ ಮಾಡಿ ಆದರೆ ಮೊಬೈಲನ್ನು ಅನು ಕ್ಷಣವು ಬಳಕೆ ಮಾಡಬಾರದು ಅನಿವಾರ್ಯತೆ ಇಲ್ಲದೆ ಮುಂದುವರಿಸಬೇಕಾಗಿತ್ತು. ಆದರೆ ಇಂದಿನ ದಿನಗಳಲ್ಲಿ ಅಂತಹ ಮೊಬೈಲ್ ರಿಪೋರ್ಟಕ್ಕೆ ಕಡಿವಾಣ ಹಾಕಬೇಕಾಗಿದೆ ಮಕ್ಕಳು ತಂದೆ ತಾಯಿಯರಿಗೆ ಮತ್ತು ಸಹಸ್ರರಿಗೆ ಶಿಕ್ಷಕರಿಗೆ ಗೌರವವನ್ನು ತರುವಂತಹ ನಿಟ್ಟಿನಲ್ಲಿ ವಿದ್ಯಾಭ್ಯಾಸವನ್ನು ಪಡೆಯಬೇಕು ಮತ್ತು ನಾಗರಿಕ ಸಮಾಜವನ್ನು ಸೃಷ್ಟಿಸಬೇಕು ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದರು
ವೇಳೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಇದಾಯತ್ ಉಲ್ಲಾ ಉಪಾಧ್ಯಕ್ಷರಾದ ಸಫೀನಾ ಬಡ್ತಿ ಪಡೆದ ಮುಖ್ಯ ಶಿಕ್ಷಕ ಮಹಮ್ಮದ್ ಸಾಧಿಕ್, ಉರ್ದು ಸಿ ಆರ್ ಪಿ ಅಕಮಲ್ ಖಾನ್, ಅಸ್ಮ ಸುಲ್ತಾನ ತಾಜ್ ಪಾಶ ರಿಯಾನ ಕಾನಂ, ನೂರು ನಿಸ,ದಲಿತ ಸಂಘಟನೆಯ ಮುಖಂಡ ಡಿಪಿಎಸ್ ವೆಂಕಟೇಶ್ ಮಂಜುನಾಥ್ ಹಾಗೂ ಸಹಚರರು ಮತ್ತು ಸ್ಥಳೀಯ ಶಾಲೆಯ ಮಕ್ಕಳ ಎಲ್ಲಾ ಪೋಷಕರು ಸಹ ಹಾಜರಿದ್ದರು.