

ಶ್ರೀನಿವಾಸಪುರ : ತಾಯಿ ಮೊದಲ ಗುರು ಮನೆಗಳಲ್ಲಿ ತಾಯಿಯು ಮಕ್ಕಳಿಗೆ ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದು ಬಿಇಒ ಬಿ.ಸಿ.ಮುನಿಲಕ್ಷಮ್ಯ ತಿಳಿಸಿಕೊಟ್ಟರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ದ ಸರ್ಕಾರಿ ಉರ್ದು, ಆಂಗ್ಲ ಮಾದ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಶಾಲಾ ವಾರ್ಷಿಕೋತ್ಸವ ಹಾಗು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರು ಭೋದಿಸುವಂತಹ ಪಠ್ಯವನ್ನು ಆಲಿಸಬೇಕು. ವಿದ್ಯಾರ್ಥಿಗಳು ನಿರ್ಧಿಷ್ಟಗುರಿಯೊಂದಿಗೆ ಓದಬೇಕು . ಪೋಷಕರು ತಮ್ಮ ಮಕ್ಕಳ ಓದಿನ ಬಗ್ಗೆ ನಿರಂತರವಾದ ಪ್ರೋತ್ಸಾಹ ನೀಡಬೇಕು ಎಂದರು.
ಸರ್ಕಾರಿ ಶಾಲೆಯಲ್ಲಿ ಕಳೆದ ವರ್ಷದ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ೧೧೫ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಈ ಬಾರಿ ವಿದ್ಯಾರ್ಥಿ ಗಳ ದಾಖಲಾತಿ ಸಂಖ್ಯೆ ೧೮೩ ಕ್ಕೆ ಏರಿದೆ ಮುಖ್ಯ ಕಾರಣ ಶಿಕ್ಷಕರು ನೀಡುತ್ತಿರುವ ಶಿಕ್ಷಣ. ಹಾಗು ದಾನಿಗಳ ಸಹಕಾರದಿಂದ ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಿಂದ ದಾಖಲಾತಿ ಹೆಚ್ಚಿರುವುದು ಪ್ರಸಂಶಯನೀಯ.
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದರಿಂದ ಕೊಠಡಿಗಳ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ ವಕ್ಫ್ ಮಂಡಳಿ ಅಧ್ಯಕ್ಷ ನಿಸಾರ್ ಅಹ್ಮದ್ ಎರಡು ಕೊಠಡಿಗಳು , ಇಲಾಖೆಯಿಂದ ಎರಡು ಕೊಠಡಿಗಳು, ಪುರಸಭೆಯಿಂದ ಎರಡು ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು. ಮುಂದಿನ ತಿಂಗಳು ಬಜೆಟ್ ನಂತರ ಅನುದಾನ ಮಂಜೂರು ಮಾಡಲಾಗುತ್ತದೆ ನಂತರ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು.
ಪ್ರೊಷನರಿ ಎಸ್ಪಿ ಯಶ್ಕುಮಾರ್ ಶರ್ಮ ಮಾತನಾಡಿದರು , ಬಿಇಒ ಬಿ.ಸಿ.ಮುನಿಲಕ್ಷö್ಮಯ್ಯ, ಬಿಆರ್ಸಿ ಕೆ.ಸಿ.ವಸಂತ, ಜಿಲ್ಲೆಯ ಜಿಲ್ಲೆಯ ವಕ್ಫ್ ಮಂಡಳಿ ಅಧ್ಯಕ್ಷ ನಿಸಾರ್ ಅಹ್ಮದ್ , ಎಪಿಜೆ ಅಬ್ದಲ್ಕಲಾಂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ಮಜೀದ್, ಕಾರ್ಯದರ್ಶಿ ಎಚ್.ಎಸ್.ಅಕ್ರಮ್ಬಾಷ , ಖಾಜಾಂಚಿ ಎಪಿಎಸ್ ರಿಜ್ವಾನ್ಅಹ್ಮದ್, ಸದಸ್ಯ ನಸ್ರತ್ ಅಹ್ಮದ್ಜಾನ್, ಗುಲಾಬ್ ಜಾನ್, ಕುಮರ್ಇಮ್ರಾನ್,ಜಖಾವುದೀನ್, ಅಲ್ಲಾ ಬಕಾಷ್, ಮುಖ್ಯ ಶಿಕ್ಷಕ ಮಹಮದ್, ಸಾದಿಕ್ ಶಿಕ್ಷಕರಾದ ರೀಯಾನಾಖಾನಂ,ಭಾರತಮ್ಮ, ನೂರ್ ಉನ್ನೀಸಾ ,ಆಸ್ತಮಾ ಸುಲ್ತಾನಾ, ಆಮ್ಮ ಜಾನ್, ಎಸ್ ಡಿ ಎಂಸಿ.ಅಧ್ಯಷ ಇದಾಯಿತುಲ್ಲಾ ,ಸಂಘಟನಾ ಕಾರ್ಯದರ್ಶಿ ಇಂತಿಯಾಸ್, ಉಪಾಧ್ಯಕ್ಷ ತಬೀನಾ, ಸದಸ್ಯ ಸೈಯದ್, ಬಿಐಆರ್ ಟಿಐ.ಜಿ.ವಿ.ಚಂದ್ರಪ್ಪ, ಹಾಗೂ ಪೋಷಕರು ಉಪಸ್ಥಿರಿದ್ದರು.
