ಬೆಂಗಳೂರು: ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಟಾನೆಯಲ್ಲಿ ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ಗೆ ಸಿಲುಕಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಮಹಿಳೆ ಶ್ವೇತಾ(33) ಎಂದು ತಿಳಿದು ಬಂದಿದೆ. ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಽ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು, ಮಲ್ಲತ್ತಹಳ್ಳಿಯಲ್ಲಿ ವಾಸ ಮಾಡುತಿದ್ದ ಶ್ವೇತಾ, ಬುಧವಾರ ದಿವಸ ಶ್ರೀಪೇಂಟ್ಸ್ ಫ್ಯಾಕ್ಟರಿಯಲ್ಲಿ ಡ್ಯೂಟಿಯಲ್ಲಿದ್ದು ಬಣ್ಣ ಬೆರೆಸುವ ಗ್ರೈಂಡರ್ ನಲ್ಲಿ ಜಡೆ ಸಿಲುಕಿದ ಪರಿಣಾಮ ಶ್ವೇತಾಳ ತಲೆ ಸೆಳೆದುಕೊಂಡಿದೆ, ಪರಿಣಾಮ ತಲೆ ಕತ್ತರಿಸಿ ಹೋಗಿ ಶ್ವೇತಾ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಬಣ್ಣ ಗಟ್ಟಿಯಾಗುತ್ತಿದ್ದರಿಂದ ಚೆಕ್ ಮಾಡಲಿಕ್ಕಾಗಿ ಗ್ರೈಂಡರ್ ಒಳಗೆ ಬಗ್ಗಿದಾಗ ಮಹಿಳೆಯ ಜಡೆ ಗ್ರೈಂಡರ್ ಮೇಷಿನಿಗೆ ಸಿಲುಕಿದೆ. ಜಡೆ ಸಿಲುಕಿ ಸೆಳೆದುಕೊಂಡಾದ ಶ್ವೇತಾ ಕೂಗಿಕೊಂಡರೂ ಸಹ ಗ್ರೈಂಡರ್ ಭಾರೀ ಶಬ್ದಕ್ಕೆ ಯಾರಿಗೂ ಕೇಳಿಸಿಲ್ಲದ ಕಾರಣ ಶ್ವೇತಾ ಧುರ್ಮರಣಕ್ಕೆ ಒಳಗಾಗಿದ್ದಾರೆ.
ಶ್ವೇತಾ ಅವರ ಪತಿ ಸುರೇಶ್ ಅವರಿಗೆ ಕಾರ್ಖಾನೆ ಮಾಲೀಕ ರವಿ ಪ್ರಕಾಶ್ ಅವರಿಂದ ಕರೆ ಬಂದಿದ್ದು, ಆಕೆಗೆ ಅಪಘಾತವಾಗಿದೆ ಎಂದು ತಿಳಿಸಿದರು. ಸುರೇಶ್ ಫ್ಯಾಕ್ಟರಿ ತಲುಪಿದಾಗ ತಲೆಗೆ ಪೆಟ್ಟಾಗಿ ಪತ್ನಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ . ಕಾರ್ಖಾನೆಯವರು ಕಾರ್ಮಿಕರಿಗೆ ಹೆಲ್ಮೆಟ್, ಹೆಡ್ ಶೀಲ್ಡ್ ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಶ್ವೇತಾಳ ಪತಿ ಸುರೇಶ್ ಅವರು ಮಾಲೀಕರ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಿಸಿದ್ದಾರೆ.