

ಬೆಂಗಳೂರು: ರಾಜಧಾನಿಯ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದಿದ್ದು ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಧರಾಶಾಹಿವಾಗಿರುವ ಕಟ್ಟಡದ ಸಮೀಪ ಮೂವರು ಕಾರ್ಮಿಕರ ಶವ ಪತ್ತೆಯಾಗಿದ್ದು, ಅವಶೇಷಗಳಡಿ ಇನ್ನೂ ಸುಮಾರು 10 ಕ್ಕೂ ಹೆಚ್ಚು ಮಂದಿ ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಹೆಣ್ಣೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತಿದ್ದಾರೆ. ನೆರೆಮನೆಯವರು ಕಟ್ಟಡ ಕುಸಿದು ಬೀಳುತ್ತೀರುವಾಗ ಮಾಡಿರುವ ವಿಡೀಯೊ ವೈರಲ್ ಆಗಿದೆ
ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಹೊರಬಂದು ಘಟನೆಯ ಭೀಕರತೆ ಬಿಚ್ಚಿಟ್ಟಿದ್ದಾನೆ. ತಲೆಯಲ್ಲಿ ರಕ್ತಸಿಕ್ತಗಾಯದಿಂದ ಹೊರಬಂದು ಕಟ್ಟಡದಲ್ಲಿ ನಮ್ಮವರು ಒಳಗೆ ಸಿಲುಕಿದ್ದಾರೆಂದು ಕಣ್ಣೀರು ಹಾಕಿದ್ದಾನೆ. ಸ್ಥಳಕ್ಕೆ ಪೋಲಿಸರು ಆಗಮಿಸಿದ್ದಾರೆ. ಆಂಬ್ಯುಲೆನ್ಸ್ ದೌಡಾಯಿಸಿವೆ. ಈ ಬಗ್ಗೆ ಹೆಚ್ಚಿನ ಸಾವು ನೋವಿನ ಸಂಗತಿ ಬೆಳಕಿಗೆ ಬರಬೇಕಾಗಿದೆ.

