ರಾಸು ವಿಮೆ ಪಡೆದುಕೊಂಡ ಫಲಾನುಭವಿಗಳು ಮತ್ತು ರಾಸು ಖರೀದಿಸಿ ಕ್ಷೀರೋತ್ಪಾದನೆಯಲ್ಲಿ ತೊಡಗಬೇಕು ; ಎನ್.ಹನುಮೇಶ್

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ರಾಸು ವಿಮೆ ಪಡೆದುಕೊಂಡ ಫಲಾನುಭವಿಗಳು ಮತ್ತು ರಾಸು ಖರೀದಿಸಿ ಕ್ಷೀರೋತ್ಪಾದನೆಯಲ್ಲಿ ತೊಡಗಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು.
ಪಟ್ಟಣದ ಶಿಬಿರ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮೃತಪಟ್ಟ ರಾಸುಗಳ ಮಾಲೀಕರಿಗೆ ರಾಸು ವಿಮಾ ಚೆಕ್ ವಿತರಿಸಿ ಮಾತನಾಡಿ, ಹಾಲು ಉತ್ಪಾದಕರಿಗೆ ರಾಸು ವಿಮೆ ವರದಾನವಾಗಿದೆ ಎಂದು ಹೇಳಿದರು.
ಹಸುಗಳಿಗೆ ಅವುಗಳಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವುದರ ಮೂಲಕ ಗುಣಮಟ್ಟದ ಹಾಲು ಉತ್ಪಾದನೆ ಮಾಡಬೇಕು. ಇಲ್ಲವಾದರೆ ದುಡಿತಕ್ಕೆ ಫಲ ಸಿಗುವುದಿಲ್ಲ ಎಂದು ಹೇಳಿದರು.
ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್.ನರಸಿಂಹಯ್ಯ ಮಾತನಾಡಿ, ಬೇಸಿಗೆ ಕಾಲದಲ್ಲಿ ಹಸಿರು ಮೇವಿನ ಕೊರತೆ ಕಾಡುತ್ತದೆ. ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಸವಾಲಿನ ವಿಷಯವಾಗಿದೆ. ಆದ್ದರಿಂದ ರೈತರು ಒಣ ಮೇವಿನ ಜತೆಗೆ ವೈಜ್ಞಾನಿಕವಾಗಿ ತಯಾರಿಸಲಾದ ಪಶು ಆಹಾರ ನೀಡಬೇಕು. ಕೆಚ್ಚಲು ಬಾವು ಬರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ವಿಸ್ತರಣಾಧಿಕಾರಿಗಳಾದ ಎಂ.ಜಿ.ಶ್ರೀನಿವಾಸ್, ಎಸ್.ವಿನಾಯಕ, ಪಿ.ಕೆ.ನರಸಿಂಹರಾಜು, ಎನ್.ಶಂಕರ್, ಕೆ.ಪಿ.ಶ್ವೇತ, ಜಿ.ಎನ್.ಗೋಪಾಲಕೃಷ್ಣರೆಡ್ಡಿ ಇದ್ದರು
.