ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಬೆಳ್ಮಣ್ಣು ರೋಟರಿ ಕ್ಲಬ್ ಆತಿಥ್ಯದಲ್ಲಿ 3182 ಜಿಲ್ಲೆ ವಲಯ 5 ರಲ್ಲಿ ಒಳಗೊಂಡ ವಲಯ ಕ್ರೀಡಾಕೂಟ ಗೊಬ್ಬು ಗಮ್ಮತ್ 2021ಬೆಳ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜ್ ಕ್ರೀಡಾಂಗಣದಲ್ಲಿ ಇದೇ ಬರುವ ದಿನಾಂಕ 31ಜನವರಿ ಆದಿತ್ಯವಾರದಂದು ನಡೆಯಲಿದೆ.9 ಗಂಟೆಗೆ ಸರಿಯಾಗಿ ಉದ್ಘಾಟನಾ ಸಮಾರಂಭ ನಡೆಯಲಿದ್ದು ರೋ.ಡಾ ಭರತೇಶ್ ಮಾಜಿ ಜಿಲ್ಲಾ ಗವರ್ನರ್ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ರೋಟರಿ ಕ್ಲಬ್ ಬೆಳ್ಮಣ್ಣು ಅಧ್ಯಕ್ಷರಾದ ರೋಟೇರಿಯನ್ ಸುಭಾಷ್ ಕುಮಾರ್ ನಂದಳಿಕೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಹಾಯಕ ಗವರ್ನರ್ ರೋಟೇರಿಯನ್ ನವೀನ್ ಅಮೀನ್ ವಲಯ ತರಬೇತುದಾರರು ರೋಟೇರಿಯನ್ ಪುಂಡಲಿಕ ಮರಾಠೆ ವಲಯ ಸೇನಾನಿ ರೋಟೇರಿಯನ್ ಸುರೇಶ್ ರಾವ್ ವಲಯ ಕ್ರೀಡಾ ನಿರ್ದೇಶಕರು ರೋಟೇರಿಯನ್ ದೇವೇಂದ್ರ ಶೆಟ್ಟಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಸತೀಶ್ ಮಾಡ ಪ್ರೌಢಶಾಲೆ ಬೆಳ್ಮಣ್ಣುಮುಖ್ಯ ಶಿಕ್ಷಕರಾದ ಶ್ರೀಮತಿ ಮಾಲತಿ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ ರೋಟೇರಿಯನ್ ಅಲ್ಲೆನ್ ಲೂಯಿಸ್ ಮಾಜಿ ಜಿಲ್ಲಾ ಸಹಾಯಕ ಗವರ್ನರ್ ರೋಟೇರಿಯನ್ ಸೂರ್ಯಕಾಂತ್ ಶೆಟ್ಟಿ ವಲಯ ಸೇನಾನಿ ರೊ ಮಾದೇಗೌಡ ಶ್ರೀ ದುರ್ಗಾ ಫೂಲ್ಸ್ ಮಾಲಕರಾದ ರೋಟೇರಿಯನ್ ನಿತ್ಯಾನಂದ ಶೆಟ್ಟಿ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ರೂಪ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಕಾರ್ಯದರ್ಶಿ ರವಿ ರಾಜ್ ಶೆಟ್ಟಿ ಕಾರ್ಯಕ್ರಮ ನಿರ್ದೇಶಕರಾದ ರೋಟೇರಿಯನ್ ವಿಘ್ನೇಶ್ ಶೆಣೈ ಉಪಸ್ಥಿತರಿರುವರು