JANANUDI.COM NETWORK

ಬೆಳಗಾವಿ: ಬೆಳಗಾವಿ ದ್ವಿಸದಸ್ಯ ವಿಧಾನ ಪರಿಷತ್ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಪ್ರಥಮ ಪ್ರಾಶ್ತ್ಯದಲ್ಲಿ ಜಯಭೇರಿ ಭಾರಿಸಿದ್ದಾರೆ. ರಮೇಶ್ ಜಾರಕಿ ಹೋಳಿಯ ಬೆಂಬಲಿಗ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ 2ನೇ ಪ್ರಾಶ್ತ್ಯದಲ್ಲಿ ಗೆಲುವು ಗಳಿಸಿದ್ದಾರೆ. ಆದರೆ ಬಿಜೆಪಿಯ ಮಹಾಂತೇಶ ಕವಟಗಿಮಠ 3ನೇ ಸ್ಥಾನ ಪಡೆದು ಸೋತಿದ್ದಾರೆ..
ಬಿಜೆಪಿಯಿಂದ ಇಬ್ಬರಿಗೆ ಟಿಕೆಟ್ ನೀಡಬೇಕೆಂದು ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಬೇಡಿಕೆಯಿಟ್ಟಿದ್ದರು. ಆದರೆ ಮಹಾಂತೇಶ ಕವಟಗಿಮಠ ಅವರಿಗೆ ಮಾತ್ರ ಟಿಕೆಟ್ ನೀಡಲಾಗಿತ್ತು. ಹಾಗಾಗಿ ಲಖನ್ ಜಾರಕಿಹೊಳಿ ಪಕ್ಷೇತರರಾಗಿ ಕಣಕ್ಕಿಳಿದಿದ್ದರು.

ಕಾಂಗ್ರೆಸ್ ಸೋಲಿಸುವುದಕ್ಕಾಗಿಯೇ ಲಖನ್ ಕಣಕ್ಕಿಳಿಸಿದ್ದಾಗಿ ರಮೇಶ ಜಾರಕಿಹೊಳಿ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದರೆ ಬಿಜೆಪಿಯೇ ಸೋಲುಂಡು ಅವರ ಮಂತ್ರ ತಿರು ಮಂತ್ರವಾಗಿ ಪರಿಣಮಿಸಿ, ಬಿಜೆಪಿ ಗೆ ನುಂಗಬಾರದ ತುತ್ತಾಗಿದೆ. ಈ ಚುನಾವಣೆ ಫಲಿತಾಂಶವು ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಭಾರಿ ಬದಲಾವಣೆಗೆ ಕಾರಣವಾಗುವ ಸಾಧ್ಯತೆ ಕಂಡು ಬಂದಿದೆ. ಬಿಜೆಪಿಯ 13 ಶಾಸಕರಿದ್ದೂ ಪರಿಷತ್ ಅಭ್ಯರ್ಥಿಯನ್ನು ಗೆಲ್ಲಿಸಲು ಅಸಾಧ್ಯವಾಗದಿದ್ದದು ಬಿಜೆಪಿ ಗೆ ಮುಖ ಭಂಗವಾಗಿ ಪರಿಣಮಿಸಿದೆ.
.